ಮಂಗಳವಾರ, ಮೇ 26, 2020
27 °C

ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 22 ಡಾಲರ್‌ಗೂ ಕಡಿಮೆ: ಜಾಗತಿಕ ಬೇಡಿಕೆ ಕುಸಿತ 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕಚ್ಚಾ ತೈಲ ಉತ್ಪಾದನೆ ಕುಸಿತ

ನ್ಯೂಯಾರ್ಕ್‌: ಜಗತ್ತಿನಾದ್ಯಂತ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು 6,00,000 ದಾಟಿವೆ. ಬಹುತೇಕ ರಾಷ್ಟ್ರಗಳು ಲಾಕ್‌ಡೌನ್‌ ಘೋಷಿಸಿವೆ.  ಸಂಚಾರ ನಿರ್ಬಂಧ ಹಾಗೂ ಕೈಗಾರಿಕೆಗಳು ಕಾರ್ಯನಿರ್ವಹಿಸದ ಕಾರಣ ತೈಲ ಬೇಡಿಕೆ ಭಾರೀ ಕುಸಿತ ಕಂಡಿದೆ. ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ದರ 22 ಡಾಲರ್‌ ತಲುಪಿದೆ. 

ತೈಲ ಸಂಸ್ಕರಣ ಘಟಕಗಳು ಹಾಗೂ ಕಚ್ಚಾ ತೈಲ ಉತ್ಪಾದಕ ಕಂಪನಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ನ್ಯೂಯಾರ್ಕ್‌ನಲ್ಲಿ ತೈಲ ಫ್ಯೂಚರ್ಸ್‌ ಶೇ 4.5ರಷ್ಟು ಕುಸಿದಿದೆ. ಭಾರತದಿಂದ ದಕ್ಷಿಣ ಕೊರಿಯಾ ವರೆಗೂ ಸಂಸ್ಕರಣ ಘಟಕಗಳಿಂದ ಕಚ್ಚಾ ತೈಲ ಬೇಡಿಕೆ ಇಳಿಕೆಯಾಗಿದೆ. ಮುಂದಿನ ತಿಂಗಳಲ್ಲಿ ನಿತ್ಯ ಬಳಕೆ 22 ಮಿಲಿಯನ್‌ ಬ್ಯಾರೆಲ್‌ಗೆ ಇಳಿಯುವ ಸಾಧ್ಯತೆ ಇದೆ. 

ಕಳೆದ 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಚ್ಚಾ ತೈಲ ಉತ್ಪಾದಕರು ಉತ್ಪಾದನೆ ಕಡಿತಗೊಳಿಸುವ ಒತ್ತಡಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: 

ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೆಟ್‌ ತೈಲ ಫ್ಯೂಚರ್ಸ್‌ ಪ್ರತಿ ಬ್ಯಾರೆಲ್‌ಗೆ  ಶೇ 3.1ರಷ್ಟು ಇಳಿಕೆಯಾಗಿ 21.89 ಡಾಲರ್‌ ತಲುಪಿದೆ. ಬ್ರೆಂಟ್‌ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ ಶೇ 3.4ರಷ್ಟು ಕಡಿಮೆಯಾಗಿ 25.45 ಡಾಲರ್‌ ಮುಟ್ಟಿದೆ. 

ತೈಲ ಸಂಗ್ರಹ ಸಾಕಷ್ಟು ಇರುವುದರಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಪಾಕಿಸ್ತಾನ ಗುರುವಾರದಿಂದ ನಿಲ್ಲಿಸಿದೆ. 

ಕೆನಡಾದ ಘನವಾದ ಕಚ್ಚಾ ತೈಲ ದರ ಅತಿ ಕಡಿಮೆ ಮಟ್ಟ ತಲುಪಿದ್ದು, ಅದನ್ನು ಸಂಸ್ಕರಣ ಘಟಕಗಳಿಗೆ ಸಾಗಣೆ ಮಾಡುವ ವೆಚ್ಚ ತೈಲ ದರಕ್ಕಿಂತಲೂ ಅಧಿಕವಾಗಲಿದೆ. ಇದರಿಂದಾಗಿ ಕಚ್ಚಾ ತೈಲ ಉತ್ಪಾದಕರು ಇನ್ನಷ್ಟು ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು