ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಯಿಲ್‌ ಇಂಡಿಯಾ ಲಿಮಿಟೆಡ್‌ ಲಾಭ ಶೇ18ರಷ್ಟು ಏರಿಕೆ

Published 20 ಮೇ 2024, 15:39 IST
Last Updated 20 ಮೇ 2024, 15:39 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ಆಯಿಲ್‌ ಇಂಡಿಯಾ ಲಿಮಿಟೆಡ್‌ (ಒಐಎಲ್‌) 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹2,332 ಕೋಟಿ ನಿವ್ವಳ ಲಾಭ ಗಳಿಸಿದೆ.

2022–23ರ ಇದೇ ಅವಧಿಯಲ್ಲಿ ನಿಗಮವು ₹1,979 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 18ರಷ್ಟು ಏರಿಕೆಯಾಗಿದೆ. ಕಚ್ಚಾ ತೈಲದ ದರ ಹೆಚ್ಚಳದಿಂದ ಲಾಭದಲ್ಲಿ ಏರಿಕೆಯಾಗಿದೆ ಎಂದು ಕಂಪನಿ ಷೇರುಪೇಟೆಗೆ ಸೋಮವಾರ ತಿಳಿಸಿದೆ.

ತೈಲ ದರ ಹೆಚ್ಚಳದಿಂದ ವಹಿವಾಟಿನಲ್ಲಿ ಶೇ 16ರಷ್ಟು ಏರಿಕೆಯಾಗಿದ್ದು, ₹10,375 ಕೋಟಿ ಮೌಲ್ಯದ ವಹಿವಾಟು ನಡೆದಿದೆ. 

ಕಚ್ಚಾ ತೈಲ ಉತ್ಪಾದನೆ ಮತ್ತು ಮಾರಾಟದಿಂದ ಶೇ 18ರಷ್ಟು ಗಳಿಕೆ ಕಂಡಿದೆ. ಆದರೆ, ದರ ಇಳಿಕೆಯಿಂದ ಅನಿಲ ಮಾರಾಟದ ವರಮಾನವು ಶೇ 16.5ರಷ್ಟು ಇಳಿದಿದೆ. 2023–24ರ ಪೂರ್ಣ ಹಣಕಾಸು ವರ್ಷದಲ್ಲಿ ನಿವ್ವಳ ಲಾಭವು ಶೇ 29ರಷ್ಟು ಕುಸಿತ ಕಂಡಿದ್ದು, ₹6,980 ಕೋಟಿಗೆ ಇಳಿದಿದೆ. ಮಂಡಳಿಯು 1:2 ಬೋನಸ್‌ ನೀಡಲು ಅನುಮೋದನೆ ನೀಡಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT