ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ₹ 25.50 ಹೆಚ್ಚಳ: ಇಂದಿನಿಂದಲೇ ಜಾರಿ

ಅಕ್ಷರ ಗಾತ್ರ

ನವದೆಹಲಿ: ಇಂದಿನಿಂದಲೇ ಜಾರಿಗೆ ಬರುವಂತೆ ತೈಲ ಕಂಪನಿಗಳು ಗೃಹ ಬಳಕೆಯ ಅಡುಗೆ ಅನಿಲದ ಪ್ರತೀ ಸಿಲಿಂಡರ್‌ ಬೆಲೆಯಲ್ಲಿ ₹ 25.50 ಹೆಚ್ಚಳ ಮಾಡಿವೆ.

ಈ ಮೂಲಕ 14.2 ಕೆಜಿ ತೂಕದ ಸಿಲಿಂಡರ್‌ ಬೆಲೆ ದೆಹಲಿಯಲ್ಲಿ ₹ 834.50 ಆಗಿದೆ.

ಇತ್ತ, 19 ಕೆಜಿ ಸಿಲಿಂಡರ್ ಬೆಲೆಯಲ್ಲೂ ಸಹ ₹ 76 ಹೆಚ್ಚಿಸಲಾಗಿದ್ದು, ₹ 1,550 ಆಗಿದೆ.

ಮುಂಬೈ ಮತ್ತು ಕೋಲ್ಕತ್ತಾದಲ್ಲೂ ಸಿಲಿಂಡರ್‌ ಬೆಲೆ ₹ 834.50 ಆಗಿದ್ದು, ಚೆನ್ನೈನಲ್ಲಿ ಒಂದು ಎಲ್‌ಪಿಜಿ ಸಿಲಿಂಡರ್‌ಗೆ ₹ 850.50 ಆಗಿದೆ. ಬೆಂಗಳೂರಲ್ಲಿ 14.2 ಕೆ.ಜಿಯ ಸಿಲಿಂಡರ್‌ಗೆ ₹ 837.5 (ಜೂನ್ ತಿಂಗಳಲ್ಲಿ₹ 812), ಮತ್ತು 19 ಕೆಜಿಯ ಸಿಲಿಂಡರ್ ದರ ₹ 1617(ಜೂನ್ ತಿಂಗಳಲ್ಲಿ₹ 1532.50)ಆಗಿದೆ.

ಎಲ್‌ಪಿಜಿ ಬೆಲೆಗಳನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಿಸಲಾಗುತ್ತದೆ ಮತ್ತು ಜುಲೈ 1ರ ಈ ಹೊಸ ಪರಿಷ್ಕರಣೆ ಸೇರಿ ಆರು ತಿಂಗಳಲ್ಲಿ ಪ್ರತಿ ಸಿಲಿಂಡರ್‌ ಬೆಲೆಯಲ್ಲಿ ₹ 140 ರಷ್ಟು ಹೆಚ್ಚಾಗಿದೆ. ಜೂನ್‌ನಲ್ಲಿ ಬೆಲೆಯಲ್ಲಿ ಬದಲಾವಣೆ ಆಗಿರಲಿಲ್ಲ.

ದೇಶದ ಹಲವು ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಬೆಲೆ ₹ 100ರ ಗಡಿ ದಾಟಿರುವ ಬೆನ್ನಲ್ಲೇ ಸಿಲಿಂಡರ್ ಬೆಲೆ ಏರಿಗೆ ಜನರಿಗೆ ನುಂಗಲಾರದ ತುತ್ತಾಗಿದೆ.

ಫೆಬ್ರವರಿಯಲ್ಲಿ, ಎಲ್‌ಪಿಜಿ ಬೆಲೆಗಳನ್ನು ಮೂರು ಬಾರಿ ಪರಿಷ್ಕರಿಸಲಾಗಿತ್ತು. ಫೆಬ್ರವರಿ 4 ರಂದು ಸಿಲಿಂಡರ್‌ಗೆ ₹25, ಫೆಬ್ರವರಿ 15 ರಂದು ₹50 ಮತ್ತು ಫೆಬ್ರವರಿ 25 ರಂದು ₹25 ಹೆಚ್ಚಳವಾಗಿತ್ತು. ಮಾರ್ಚ್‌ನಲ್ಲಿ, ಮತ್ತೆ ₹ 25 ರಷ್ಟು ಹೆಚ್ಚಿಸಲಾಗಿತ್ತು. ಒಂದು ಬಾರಿ ಮಾತ್ರ ₹ 10 ಬೆಲೆಯನ್ನು ಕಡಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT