ನ್ಯೂಯಾರ್ಕ್: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತ ಎರಡನೇ ವಾರವೂ ಕಚ್ಚಾತೈಲ ದರ ಏರಿಕೆ ಕಂಡಿದೆ.

ಬ್ರೆಂಟ್ ಮತ್ತು ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮಿಡಿಯೆಟ್ (ಡಬ್ಲ್ಯುಟಿಐ ದರ್ಜೆಯ ಕಚ್ಚಾ ತೈಲಗಳ ದರವು ವಾರದ ವಹಿವಾಟಿನಲ್ಲಿ ಶೇ 1ಕ್ಕಿಂತಲೂ ಹೆಚ್ಚು ಏರಿಕೆ ಕಂಡಿದೆ. ಬ್ರೆಂಟ್ ತೈಲ ದರವು ಸೋಮವಾರದ ವಹಿವಾಟಿನ ಅಂತ್ಯದ ವೇಳೆಗೆ ಒಂದು ಬ್ಯಾರಲ್ಗೆ 67.53 ಡಾಲರ್ಗಳಷ್ಟಿತ್ತು. ಶುಕ್ರವಾರದ ವಹಿವಾಟಿನ ಅಂತ್ಯದ ವೇಳಗೆ 68.28 ಡಾಲರ್ಗಳಿಗೆ ಏರಿಕೆ ಕಂಡಿದೆ. ಡಬ್ಲ್ಯುಟಿಐ ದರ್ಜೆಯ ಕಚ್ಚಾ ತೈಲ ದರವು ಒಂದು ಬ್ಯಾರಲ್ಗೆ 64.38 ಡಾಲರ್ಗಳಷ್ಟು ಇದ್ದಿದ್ದು 65.90 ಡಾಲರ್ಗಳಿಗೆ ಏರಿಕೆ ಆಗಿದೆ.

ಅಮೆರಿಕ ಮತ್ತು ಯುರೋಪ್ನಲ್ಲಿ ಕೋವಿಡ್–19 ಸಾಂಕ್ರಾಮಿಕ ನಿಯಂತ್ರಿಸಲು ಹೇರಿದ್ದ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಕೈಗಾರಿಕಾ ಚಟುವಟಿಕೆಗಳಲ್ಲಿ ಚೇತರಿಕೆ ಕಾಣುತ್ತಿದೆ. ಜೊತೆಗೆ ಕೋವಿಡ್ಗೆ ಲಸಿಕೆ ನೀಡುವ ಕಾರ್ಯಕ್ರಮವೂ ವೇಗ ಪಡೆದುಕೊಂಡಿದೆ. ಈ ಎಲ್ಲಾ ಕಾರಣಗಳಿಂದಾಗಿ ಇಂಧನ ಬೇಡಿಕೆಯು ಹೆಚ್ಚಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ತೈಲ ದರ ಏರಿಕೆಯು ಸತತ ಎರಡನೇ ವಾರವೂ ಏರುಮುಖವಾಗಿದೆ. ಹೀಗಿದ್ದರೂ ಅಲ್ಪಾವಧಿಗೆ ಬೆಲೆಯ ಇದೇ ರೀತಿ ಇರಲಿದೆ ಎಂದು ಹೇಳಲು ಆಗುವುದಿಲ್ಲ. ಏರಿಳಿತ ಕಾಣುವ ಸಾಧ್ಯತೆ ಇದೆ ಎಂದು ಒಂಡಾ ಕಂಪನಿಯ ಮಾರುಕಟ್ಟೆ ವಿಶ್ಲೇಷಕ ಎಡ್ವರ್ಡ್ ಮೋಯಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.