ಶುಕ್ರವಾರ, ಜುಲೈ 30, 2021
28 °C

₹ 12,999ಕ್ಕೆ ಒನ್‌ಪ್ಲಸ್ ಸ್ಮಾರ್ಟ್‌‌ ಟಿವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್‌ ಆಗಿರುವ ಒನ್‌ಪ್ಲಸ್, ಭಾರತದ ಮಾರುಕಟ್ಟೆಗೆ ಕಡಿಮೆ ಬೆಲೆಯ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದೆ.

ಕಡಿಮೆ ಬೆಲೆಯಲ್ಲಿಯೂ ಪ್ರೀಮಿಯಂ ಅನುಭವ ಕಟ್ಟಿಕೊಡುವ ಉದ್ದೇಶದಿಂದ ಈ ವಿಭಾಗವನ್ನು ಪ್ರವೇಶಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ. ಒನ್‌ಪ್ಲಸ್‌ ಟಿವಿ ಯು ಮತ್ತು ವೈ ಸರಣಿಗಳನ್ನು ಬಿಡುಗಡೆ ಮಾಡಿದ್ದು, ಬೆಲೆ ₹ 12,999 ರಿಂದ ₹ 49,999ರವರೆಗೆ ಇದೆ.

ಒನ್‌ಪ್ಲಸ್‌ ಟಿವಿ ಕ್ಯು1 ಸರಣಿಯ ಮೂಲಕ ಕಂಪನಿಯು 2019ರಲ್ಲಿ ಟಿವಿ ಉದ್ಯಮವನ್ನು ಪ್ರವೇಶಿಸಿತು. ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸಂದರ್ಭದಲ್ಲಿ ಪ್ರೀಮಿಯಂ ವಿಭಾಗದಲ್ಲಿ ಈ ಟಿವಿ ಮುಂಚೂಣಿ ಸ್ಮಾರ್ಟ್‌ ಟಿವಿ ಎನ್ನುವ ಹೆಗ್ಗಳಿಕೆ ಪಾತ್ರವಾಯಿತು. ಇದೀಗ ಕಂಪನಿಯು ತನ್ನ ‘ನೆವರ್‌ ಸೆಟಲ್’‌ ಮನಸ್ಥಿತಿಯನ್ನು ಟಿವಿ ವಿಭಾಗಕ್ಕೂ ಅಳವಡಿಸಿಕೊಂಡಿದೆ. 

* ಡೆಬಿಟ್‌/ಕ್ರೆಡಿಟ್‌ ಕಾರ್ಡ್‌‌ ಮೂಲಕ ಖರೀದಿಸಿದರೆ 12 ತಿಂಗಳ ಇಎಂಐ ಶುಲ್ಕ ಇಲ್ಲ

* ಅಮೆಜಾನ್‌ನಲ್ಲಿ ಒನ್‌ಪ್ಲಸ್‌ ಟಿವಿ 55ಯು1 ಮತ್ತು 43ವೈ1 ಖರೀದಿಸಿದರೆ ಅಮೆಜಾನ್‌ ಇಕೊ ಡಾಟ್‌ ಉಚಿತ

ಮಾದರಿ;ಬೆಲೆ

ಒನ್‌ಪ್ಲಸ್‌ ಟಿವಿ ವೈ ಸರಣಿ 32 ಇಂಚು; ₹  12,999

ಒನ್‌ಪ್ಲಸ್‌ ಟಿವಿ ವೈ ಸರಣಿ 43 ಇಂಚು; ₹  22,999

ಒನ್‌ಪ್ಲಸ್‌ ಟಿವಿ ಯು ಸರಣಿ 55 ಇಂಚು; ₹ 49,999

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು