ಮುಂಬೈ: ‘ಆಪರೇಷನ್ ಸಿಂಧೂರ’ ಹೆಸರಿನ ಹಕ್ಕು ಪಡೆಯಲು ಟ್ರೇಡ್ ಮಾರ್ಕ್ ರಿಜಿಸ್ಟ್ರಿಗೆ ಸಲ್ಲಿಸಿದ ಅರ್ಜಿಯನ್ನು ರಿಲಯನ್ಸ್ ಹಿಂಪಡೆದಿದೆ.
.ಆಪರೇಷನ್ ಸಿಂಧೂರ: ಸಂಯಮಕ್ಕೆ ಜಾಗತಿಕ ನಾಯಕರ ಕರೆ.
ಭಾರತೀಯರ ಶೌರ್ಯದ ಸಂಕೇತವಾಗಿ ರಾಷ್ಟ್ರೀಯ ಪ್ರಜ್ಞೆಯ ಭಾಗವಾಗಿ ಇರುವ ‘ಆಪರೇಷನ್ ಸಿಂಧೂರ’ ಅನ್ನು ಟ್ರೇಡ್ಮಾರ್ಕ್ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯ ಕಿರಿಯ ಸ್ಥಾನದಲ್ಲಿ ಇರುವ ವ್ಯಕ್ತಿಯೊಬ್ಬರು ಅನುಮತಿಯಿಲ್ಲದೆ, ಅಜಾಗರೂಕತೆಯಿಂದ ಟ್ರೇಡ್ ಮಾರ್ಕ್ಗೆ ಅರ್ಜಿ ಸಲ್ಲಿಸಿದ್ದರು ಎಂದು ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ನ ಘಟಕವಾದ ಜಿಯೋ ಸ್ಟುಡಿಯೋಸ್ ತನ್ನ ಟ್ರೇಡ್ಮಾರ್ಕ್ ಅರ್ಜಿಯನ್ನು ಹಿಂತೆಗೆದುಕೊಂಡಿದೆ ಎಂದು ಹೇಳಿದೆ.
.Operation Sindoor | ಕರೆ ಬಂದರೆ ಈಗಲೂ ಯುದ್ಧಕ್ಕೆ ಸಿದ್ಧ: ಮಾಜಿ ಸೈನಿಕರ ಮಾತು.
ಪಹಲ್ಗಾಮ್ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆದ ಆಪರೇಷನ್ ಸಿಂಧೂರ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದರ ಎಲ್ಲ ಪಾಲುದಾರರು ಬಹಳ ಹೆಮ್ಮೆಪಡುತ್ತಾರೆ. ಭಯೋತ್ಪಾದನೆಯ ಹೀನಕೃತ್ಯದ ವಿರುದ್ಧ ಭಾರತದ ರಾಜಿ ಇಲ್ಲದ ಹೋರಾಟದಲ್ಲಿ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳ ಹೆಮ್ಮೆಯ ಸಾಧನೆ ಆಪರೇಷನ್ ಸಿಂಧೂರ ಆಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ರಿಲಯನ್ಸ್ ಸಮೂಹವು ನಮ್ಮ ಸರ್ಕಾರ ಮತ್ತು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತದೆ. 'ಭಾರತ ಮೊದಲು' ಎಂಬ ಧ್ಯೇಯವಾಕ್ಯಕ್ಕೆ ನಮ್ಮ ಬದ್ಧತೆ ಅಚಲವಾಗಿದೆ ಎಂದು ಅದು ಹೇಳಿದೆ.
.Operation Sindoor | ಸರ್ವಪಕ್ಷ ಸಭೆಗೆ ಮತ್ತೆ ಮೋದಿ ಗೈರು; ಖರ್ಗೆ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.