ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರಲ್ಲಿ ವೇತನ ಹೆಚ್ಚಳ ಅಂದಾಜು ಶೇ 9.4

Last Updated 7 ಸೆಪ್ಟೆಂಬರ್ 2021, 16:53 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ನ ಎರಡನೆಯ ಅಲೆಯು ದೇಶದ ಮೇಲೆ ಭಾರಿ ಪರಿಣಾಮ ಉಂಟುಮಾಡಿದ್ದರೂ, ದೇಶದ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀಡುವ ವೇತನದಲ್ಲಿ ಮುಂದಿನ ವರ್ಷದ ಸರಾಸರಿ ಶೇಕಡ 9.4ರಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ ಎಂದು ವರದಿಯೊಂದು ಹೇಳಿದೆ.

ಈ ವರ್ಷ ಕಂಪನಿಗಳು ಮಾಡಿರುವ ವೇತನದ ಹೆಚ್ಚಳದ ಸರಾಸರಿ ಶೇ 8.8ರಷ್ಟು ಇದೆ ಎಂದು ಎಒನ್‌ ವಾರ್ಷಿಕ ವೇತನ ಹೆಚ್ಚಳ ಸಮೀಕ್ಷೆ ಹೇಳಿದೆ. ಸಮೀಕ್ಷಾ ವರದಿಯ ಪ್ರಕಾರ, 2022ನೆಯ ಇಸವಿ ವಿಚಾರವಾಗಿ ಬಹುತೇಕ ಕಂಪನಿಗಳು ಆಶಾವಾದ ಹೊಂದಿವೆ. 2022ರಲ್ಲಿ ವೇತನ ಹೆಚ್ಚಳ ಮಾಡಬೇಕು ಎಂಬ ಉದ್ದೇಶವನ್ನು ಶೇಕಡ 98.9ರಷ್ಟು ಕಂಪನಿಗಳು ಹೊಂದಿವೆ. ಈ ಅಭಿಪ್ರಾಯ ಹೊಂದಿರುವ ಕಂಪನಿಗಳ ಸಂಖ್ಯೆ 2021ರಲ್ಲಿ ಶೇ 97.5ರಷ್ಟು.

2022ರಲ್ಲಿನ ವೇತನ ಹೆಚ್ಚಳದ ಪ್ರಮಾಣವು 2019ರ ಮಟ್ಟದಲ್ಲಿ ಇರಲಿದೆ ಎಂದು ಬಹುತೇಕ ಕಂಪನಿಗಳು ಅಂದಾಜು ಮಾಡಿವೆ. ‘ಆರ್ಥಿಕ ಆರೋಗ್ಯದ ಸೂಚಕ ಇದು. 2020ರಲ್ಲಿ ವೇತನ ಹೆಚ್ಚಳದ ಪ್ರಮಾಣವು ಶೇ 6.1ರಷ್ಟು ಇತ್ತು. ಇದು 2022ರಲ್ಲಿ ಶೇ 9.4ರಷ್ಟು ಆಗುವ ನಿರೀಕ್ಷೆ ಇದೆ. ಈ ಪ್ರಮಾಣವು 2018 ಹಾಗೂ 2019ರ ಮಟ್ಟಕ್ಕೆ ಸಮ’ ಎಂದು ಎಒನ್‌ನ ಪಾಲುದಾರ ರೂಪಾಂಕ್ ಚೌಧರಿ ಹೇಳಿದ್ದಾರೆ.

ತಂತ್ರಜ್ಞಾನ, ಇ–ವಾಣಿಜ್ಯ ಮತ್ತು ಐ.ಟಿ. ಆಧಾರಿತ ಸೇವಾ ವಲಯಗಳಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ವೇತನ ಏರಿಕೆ ಆಗಲಿದೆ ಎಂದು ಅಂದಾಜು ಮಾಡಲಾಗಿದೆ. ಒಟ್ಟು 1,300 ಕಂಪನಿಗಳ ಅಂಕಿ–ಅಂಶ ವಿಶ್ಲೇಷಣೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT