ನವದೆಹಲಿ: ತನ್ನ ಅಂಗಸಂಸ್ಥೆ ಆಗಿರುವ ಪೇಟಿಎಂ ಮನಿ, ತನ್ನ ವೇದಿಕೆಯಲ್ಲಿ ರಿಟೇಲ್ ಹೂಡಿಕೆದಾರರಿಗಾಗಿ ಸಂಪತ್ತು ಮತ್ತು ಹೂಡಿಕೆಯ ಸಲಹಾ ಸೇವೆಗಳನ್ನು ಆರಂಭಿಸುತ್ತಿದೆ ಎಂದು ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವಾ ಕಂಪನಿ ಪೇಟಿಎಂ ಗುರುವಾರ ತಿಳಿಸಿದೆ.
ಮೊದಲ ಹಂತದಲ್ಲಿ ‘ವೆಲ್ತ್‌ಬಾಸ್ಕೆಟ್ಸ್’ ಎನ್ನುವ ಹೂಡಿಕೆಗೆ ಸಂಬಂಧಿಸಿದ ಆಯ್ಕೆಗಳನ್ನು ನೀಡಲು ಪೇಟಿಎಂ ಮನಿ ಸಂಸ್ಥೆಯು ವೆಲ್ತ್‌ಡೆಸ್ಕ್ ನವೋದ್ಯಮದೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ವೆಲ್ತ್‌ಬಾಸ್ಕೆಟ್ ಎನ್ನುವುದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ರೂಪಿಸಿರುವ ಸ್ಟಾಕ್‌ಗಳು ಮತ್ತು ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳ ಕಸ್ಟಮ್ ಪೋರ್ಟ್‌ಫೋಲಿಯೊ ಆಗಿದ್ದು, ನೋಂದಾಯಿತ ಹೂಡಿಕೆ ವೃತ್ತಿಪರರು ಮತ್ತು ಬಳಕೆದಾರರು ಉಚಿತ ಸ್ಟಾರ್ಟರ್ ಪ್ಯಾಕ್ ಮೂಲಕ ಅಥವಾ ಲಭ್ಯವಿರುವ ಪ್ರೀಮಿಯಂ ಮಾಸಿಕ ಪ್ಯಾಕ್‌ಗಳಿಗೆ ಚಂದಾದಾರರಾಗುವ ಮೂಲಕ ಹೂಡಿಕೆ ಮಾಡಲು ಸಾಧ್ಯವಾಗಲಿದೆ.
ಪೇಟಿಎಂ ಮನಿಯಲ್ಲಿ ಶೇ 70ಕ್ಕಿಂತಲೂ ಹೆಚ್ಚಿನವರು ಯುವ ಹೂಡಿಕೆದಾರರಿದ್ದು, ಈ ಹೊಸ ಆಯ್ಕೆಯು ಅವರನ್ನು ಆಕರ್ಷಿಸುವ ನಿರೀಕ್ಷೆ ಇದೆ ಎಂದು ಪ್ರಟಕಣೆಯಲ್ಲಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.