ನವದೆಹಲಿ: ಬಳಕೆದಾರರ ದತ್ತಾಂಶ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪೇಟಿಎಂ ಕಂಪನಿ ಬುಧವಾರ ತಿಳಿಸಿದೆ.

ಎರಡು ವರ್ಷಗಳ ಹಿಂದೆ ಪೇಟಿಎಂ ದತ್ತಾಂಶಕ್ಕೆ ಕನ್ನ ಹಾಕಲಾಗಿದ್ದು, 34 ಲಕ್ಷ ಬಳಕೆದಾರರ ದತ್ತಾಂಶಗಳು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಸೈಬರ್ ಭದ್ರತಾ ಕಂಪನಿ ‘ಫೈರ್‌ಫಾಕ್ಸ್ ಮಾನಿಟರ್’ ತಿಳಿಸಿತ್ತು. ಇದರ ಬೆನ್ನಲ್ಲೇ, ಪೇಟಿಎಂ ಸ್ಪಷ್ಟನೆ ನೀಡಿದೆ.

2020ರಲ್ಲಿ ದತ್ತಾಂಶ ಸೋರಿಕೆಯಾಗಿತ್ತು ಎಂಬ ವರದಿ ಸುಳ್ಳು ಮತ್ತು ಆಧಾರರಹಿತ. ನಮ್ಮ ಬಳಕೆದಾರರ ದತ್ತಾಂಶಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಪೇಟಿಎಂ ಮಾಲ್ ವಕ್ತಾರರು ‘ಐಎಎನ್‌ಎಸ್’ಗೆ ತಿಳಿಸಿದ್ದಾರೆ.

ಬೆಂಗಳೂರು ಸೇರಿ ಭಾರತದ 10 ನಗರಗಳಲ್ಲಿ ಗೂಗಲ್ ಸ್ಟ್ರೀಟ್ ವ್ಯೂ ಸೇವೆ ಮತ್ತೆ ಆರಂಭ

‘haveibeenpwned.com ತಾಣದಲ್ಲಿ ಅಪ್ಲೋಡ್ ಆಗಿರುವ ನಕಲಿ ವಿಚಾರವು ದತ್ತಾಂಶ ಸೋರಿಕೆಗೆ ಬಗ್ಗೆ ‘ಫೈರ್‌ಫಾಕ್ಸ್’ ಬ್ರೌಸರ್ ಅನ್ನು ತಪ್ಪಾಗಿ ಎಚ್ಚರಿಸಿದೆ. ಇದನ್ನು ಇತ್ಯರ್ಥಗೊಳಿಸುವ ವಿಚಾರವಾಗಿ ‘ಫೈರ್‌ಫಾಕ್ಸ್’ ಜತೆಗೆ ಸಂಪರ್ಕದಲ್ಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಫೈರ್‌ಫಾಕ್ಸ್’ ಪ್ರಕಾರ, 2020ರ ಆಗಸ್ಟ್ 30ರಂದು ದತ್ತಾಂಶ ಸೋರಿಕೆಯಾಗಿತ್ತು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.