ಶನಿವಾರ, ಸೆಪ್ಟೆಂಬರ್ 25, 2021
24 °C

ಮಾರಾಟ ವಿಭಾಗದಲ್ಲಿ 20 ಸಾವಿರ ನೇಮಕ: ಪೇಟಿಎಂ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಡಿಜಿಟಲ್‌ ಪಾವತಿ ಮತ್ತು ಹಣಕಾಸು ಸೇವಾ ಕಂಪನಿ ಪೇಟಿಎಂ, ಮಾರಾಟ ವಿಭಾಗದಲ್ಲಿ 20 ಸಾವಿರ ಜನರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಡಿಜಿಟಲ್‌ ತಂತ್ರಜ್ಞಾನ ಅಳವಡಿಕೆಯ ಕುರಿತು ವರ್ತಕರಲ್ಲಿ ತಿಳಿವಳಿಕೆ ಮೂಡಿಸಲು ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಪೇಟಿಎಂನ ನೇಮಕಾತಿ ಜಾಹೀರಾತಿನ ಪ್ರಕಾರ, ಫೀಲ್ಡ್‌ ಸೇಲ್ಸ್‌ ಎಕ್ಸಿಕ್ಯುಟಿವ್‌ ಆಗಿ ನೇಮಕ ಆಗುವವರು ವೇತನ ಮತ್ತು ಕಮಿಷನ್‌ ರೂಪದಲ್ಲಿ ತಿಂಗಳಿಗೆ ₹ 35 ಸಾವಿರ ಗಳಿಸುವ ಅವಕಾಶ ಸಿಗಲಿದೆ. ಯುವಕರು ಮತ್ತು ಪದವಿಪೂರ್ವ ಶಿಕ್ಷಣ ಪೂರೈಸಿರುವವರನ್ನು ನೇಮಿಸಿಕೊಳ್ಳಲು ಕಂಪನಿ ಆಸಕ್ತಿ ಹೊಂದಿದೆ.

ಪೇಟಿಎಂ ಆಲ್‌–ಇನ್‌–ಒನ್‌ ಕ್ಯುಆರ್‌ ಕೋಡ್, ಪಿಒಎಸ್‌ ಮಷಿನ್, ಪೇಟಿಎಂ ಸೌಂಡ್‌ಬಾಕ್ಸ್‌ ಮತ್ತು ಇತರೆ ಸಾಧನಗಳ ಬಳಕೆ ಹಾಗೂ ಪ್ರಯೋಜನಗಳ ಕುರಿತು ಪ್ರಚಾರ ಮಾಡುವುದು ಈ ನೇಮಕಾತಿಯ ಮೂಲ ಉದ್ದೇಶ.

18 ವರ್ಷ ತುಂಬಿದ್ದು, 10 ಅಥವಾ 12ನೇ ತರಗತಿ ಉತ್ತೀರ್ಣ ಆಗಿರುವರು ಅಥವಾ ಪದವೀಧರರು, ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಹೊಂದಿರುವವರು ಪೇಟಿಎಂ ಆ್ಯಪ್‌ ಬಳಸಿ ಅರ್ಜಿ ಸಲ್ಲಿಸಬಹುದು ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು