ಸೋಮವಾರ, ಜೂನ್ 27, 2022
21 °C
ಪೆಟ್ರೋಲ್ ಲೀಟರ್‌ಗೆ 26 ಪೈಸೆ, ಡೀಸೆಲ್‌ ಬೆಲೆ ಲೀಟರ್‌ಗೆ 25 ಪೈಸೆ ಹೆಚ್ಚಳ

ದೇಶದಾದ್ಯಂತ 17ನೇ ಬಾರಿ ಪೆಟ್ರೊಲ್, ಡೀಸೆಲ್‌ ಬೆಲೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಾದ್ಯಂತ ಮಂಗಳವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಿದ್ದು, ಈ ಮೂಲಕ ಒಂದು ತಿಂಗಳಲ್ಲಿ 17ನೇ ಬಾರಿ ತೈಲ ಬೆಲೆ ಏರಿಕೆಯಾದಂತಾಗಿದೆ.

ಸರ್ಕಾರಿ ಸ್ವಾಮ್ಯದ ಚಿಲ್ಲರೆ ತೈಲ ಮಾರಾಟಗಾರರ ಅಧಿಸೂಚನೆ ಪ್ರಕಾರ ಪೆಟ್ರೋಲ್ ಬೆಲೆ ಲೀಟರ್‌ಗೆ 26 ಪೈಸೆ ಮತ್ತು ಡೀಸೆಲ್‌ ಬೆಲೆ ಲೀಟರ್‌ಗೆ 25 ಪೈಸದಷ್ಟು ಏರಿಕೆಯಾಗಿದೆ. ಹೊಸ ದರದ ಪ್ರಕಾರ ದೆಹಲಿಯಲ್ಲಿ ಪೆಟ್ರೊಲ್ ಬೆಲೆ ಲೀಟರ್‌ಗೆ ₹ 94.49, ಡೀಸೆಲ್‌ ಬೆಲೆ ಲೀಟರ್‌ಗೆ ₹85.38ರಷ್ಟಾಗಿದೆ.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವಾರು ನಗರಗಳಲ್ಲಿ ಈಗಾಗಲೇ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹ 100 ದಾಟಿದೆ. ಪರಿಷ್ಕೃತ ತೈಲ ದರದ ಪ್ರಕಾರ ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ ₹100.72 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ₹92.69.

ಒಂದು ತಿಂಗಳಲ್ಲಿ ಪೆಟ್ರೊಲ್ ಬೆಲೆ ಪ್ರತಿ ಲೀಟರ್‌ಗೆ ₹4.09 ಹಾಗೂ ಡೀಸೆಲ್‌ ಪ್ರತಿ ಲೀಟರ್‌ಗೆ ₹4.65 ರಷ್ಟು ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು