ಮಂಗಳವಾರ, ಜುಲೈ 27, 2021
26 °C

9ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ 

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

PETROL

ನವದೆಹಲಿ: ರಾಜ್ಯ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಸೋಮವಾರವೂ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿವೆ. ಕೊರೊನಾವೈರಸ್ ಲಾಕ್‌ಡೌನ್‌ ಆಗಿ 82 ದಿನಗಳಾಗಿದ್ದು, ಸತತ 9ನೇ ದಿನ ಇಂಧನ ದರ ಏರಿಕೆ ಆಗಿದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‌ಗೆ 0.50 ಪೈಸೆ ಮತ್ತು ಡೀಸೆಲ್‌ಗೆ 0.56 ಪೈಸೆ ಹೆಚ್ಚಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ 0.48ಪೈಸೆ ಏರಿಕೆ ಆಗಿದ್ದು ಲೀಟರ್ ಪೆಟ್ರೋಲ್ ಬೆಲೆ ₹76.26 ಆಗಿದೆ. ಅದೇ ವೇಳೆ 0.59  ಪೈಸೆ  ಏರಿಕೆ ಆಗಿ ಡೀಸೆಲ್/ಲೀಟರ್ ದರ ₹74.62 ಆಗಿದೆ. 

ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್‌ ದರ 0.62 ಪೈಸೆ ಮತ್ತು ಡೀಸೆಲ್ ದರ 0.64 ಪೈಸೆ ಏರಿಕೆ ಆಗಿತ್ತು.

ದೇಶದಾದ್ಯಂತ ಇಂಧನ ಬೆಲೆ ಏರಿಕೆ ಆಗಿದ್ದು, ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ಗೆ ಅನುಗುಣವಾಗಿ ವಿವಿಧ ರಾಜ್ಯಗಳಲ್ಲಿ ಇಂಧನ ದರ ವ್ಯತ್ಯಾಸವಾಗಲಿದೆ.

ಇದನ್ನೂ ಓದಿಸತತ ಎಂಟನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು