ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ನಾಲ್ಕನೇ ದಿನವೂ ಇಂಧನ ದರ ಇಳಿಕೆ

Last Updated 21 ಅಕ್ಟೋಬರ್ 2018, 16:44 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸತತ ನಾಲ್ಕನೇ ದಿನವೂ ಇಂಧನ ದರಗಳನ್ನು ತಗ್ಗಿಸಿವೆ.

ಭಾನುವಾರ ಪೆಟ್ರೋಲ್‌ ದರ 26 ಪೈಸೆ, ಡೀಸೆಲ್‌ 17 ಪೈಸೆಯಷ್ಟು ಕಡಿಮೆಯಾಗಿದೆ.ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ₹ 82.38 ಮತ್ತು ಡೀಸೆಲ್‌ ₹ 75.58ರಂತೆ ಮಾರಾಟವಾಗಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತಗ್ಗುತ್ತಿದೆ. ಹೀಗಾಗಿ ದೇಶದಲ್ಲಿ ಇಂಧನ ದರಗಳಲ್ಲಿಯೂ ಇಳಿಕೆ ಕಾಣಲಾರಂಭಿಸಿದೆ.

ಗುರುವಾರದಿಂದ ಭಾನುವಾರದವರೆಗೆ ಒಂದು ಲೀಟರ್‌ಪೆಟ್ರೋಲ್‌ ದರದಲ್ಲಿ ₹ 1.10 ಹಾಗೂ ಡೀಸೆಲ್‌ ದರದಲ್ಲಿ 50 ಪೈಸೆ ಕಡಿಮೆಯಾದಂತಾಗಿದೆ.

ವಾರದ ವಹಿವಾಟಿನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್ ದರಗಳು ಕ್ರಮವಾಗಿ 99 ಪೈಸೆ ಮತ್ತು 19 ಪೈಸೆಗಳಷ್ಟು ಇಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT