ನವದೆಹಲಿ: ಪೆಟ್ರೋಲ್, ಡೀಸೆಲ್ ದರ ದೇಶದಾದ್ಯಂತ ಏರಿಕೆಯಾಗುತ್ತಲೇ ಇದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಈ ತಿಂಗಳಿನಲ್ಲಿ ಇದುವರೆಗೆ ಆರು ಬಾರಿ ದರ ಹೆಚ್ಚಿಸಿವೆ.

ಮಂಗಳವಾರ ಪೆಟ್ರೋಲ್ ದರ ಲೀಟರಿಗೆ 27 ಪೈಸೆ ಮತ್ತು ಡೀಸೆಲ್ ದರ 30 ಪೈಸೆ ಹೆಚ್ಚಾಗಿದೆ. ಇದರಿಂದ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ ₹ 91.80 ಮತ್ತು ಡೀಸೆಲ್ ದರ ₹ 82.36ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೊಲ್ ದರ 28 ಪೈಸೆ ಹೆಚ್ಚಾಗಿ ₹ 94.85ಕ್ಕೆ ಮತ್ತು ಡೀಸೆಲ್ ದರ 32 ಪೈಸೆ ಹೆಚ್ಚಾಗಿ ₹ 87.31ಕ್ಕೆ ತಲುಪಿದೆ.

ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಇಂಧನ ದರದಲ್ಲಿ ವ್ಯತ್ಯಾಸ ಆಗುತ್ತದೆ. ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ಪೆಟ್ರೋಲ್ ದರವು ₹ 100ರ ಗಡಿದಾಟಿದೆ.

ರಾಜಸ್ಥಾನದಲ್ಲಿ ಪೆಟ್ರೋಲ್‌ಗೆ ಗರಿಷ್ಠ ಪ್ರಮಾಣದ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ವಿಧಿಸಲಾಗುತ್ತಿದೆ. ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಪೆಟ್ರೋಲ್ ದರ ₹ 102.70 ಮತ್ತು ಡೀಸೆಲ್ ದರ ₹ 95.06ರಷ್ಟಾಗಿದೆ. ಜೈಸಲ್ಮೇರ್ ಮತ್ತು ಬಿಕಾನೇರ್‌ನಲ್ಲಿಯೂ ಪೆಟ್ರೋಲ್ ದರ 100ರ ಗಡಿ ದಾಟಿದೆ. ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿಯೂ ಪೆಟ್ರೋಲ್ ದರ ₹ 100ರ ಗಡಿ ದಾಟಿದೆ.

ಆರು ದಿನಗಳಲ್ಲಿ ಪೆಟ್ರೋಲ್ ದರ ಲೀಟರಿಗೆ ₹ 1.41ರಷ್ಟು ಮತ್ತು ಡೀಸೆಲ್ ದರ ಲೀಟರಿಗೆ ₹ 1.63ರಷ್ಟು ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.