ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿತೋ ಏರಿತು ತೈಲ ದರ: ಬೆಂಗಳೂರಿನಲ್ಲಿ ₹110 ದಾಟಿದ ಪೆಟ್ರೋಲ್‌

Last Updated 22 ಅಕ್ಟೋಬರ್ 2021, 6:08 IST
ಅಕ್ಷರ ಗಾತ್ರ

ಮುಂಬೈ: ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯ ಓಟ ಗುರುವಾರವೂ ಮುಂದುವರಿದಿದೆ. ಕಚ್ಚಾ ತೈಲ ದರದಲ್ಲೂ ಹೆಚ್ಚಳವಾಗುತ್ತಿರುವುದು ಪೆಟ್ರೋಲ್‌, ಡೀಸೆಲ್ ದರ ಹೆಚ್ಚಳಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ಅದಾಗಲೇ ಭಾರತದಾದ್ಯಂತ ತೈಲ ದರವು ಸಾರ್ವಕಾಲಿಕ ದಾಖಲೆಯ ಮಟ್ಟ ತಲುಪಿಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ತಲಾ 35 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್‌ಗೆ ಕ್ರಮವಾಗಿ ₹106.54 ಮತ್ತು ₹95.27 ಮುಟ್ಟಿದೆ. ಮುಂಬೈನಲ್ಲಿ ಪೆಟ್ರೋಲ್‌ ₹112.44 ಮತ್ತು ಡೀಸೆಲ್‌ ₹103.26ಕ್ಕೆ ಏರಿಕೆಯಾಗಿದೆ.

ಇನ್ನೂ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪ್ರತಿ ಲೀಟರ್‌ ಪೆಟ್ರೋಲ್‌ ₹110 ದಾಟಿದೆ. ಇಂದು ಪೆಟ್ರೋಲ್‌ ₹110.25 ತಲುಪಿದ್ದು, ಡೀಸೆಲ್‌ ದರ ₹101.12 ಆಗಿದೆ. ದಿನದಿಂದ ದಿನಕ್ಕೆ ತೈಲ ದರ ಏರುಗತಿಯಲ್ಲಿರುವುದರಿಂದ ಅಗತ್ಯ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ, ನಗರ ಪ್ರದೇಶಗಳಲ್ಲಿ ಜನರು ವಿದ್ಯುತ್‌ ಚಾಲಿತ ವಾಹನಗಳ ಖರೀದಿಗೆ ಒಲವು ತೋರಿದ್ದಾರೆ ಹಾಗೂ ಬೈಸಿಕಲ್‌ಗಳ ಸಂಚಾರವೂ ಹೆಚ್ಚಿದೆ.

ಕೋಲ್ಕತ್ತದಲ್ಲಿ ಪೆಟ್ರೋಲ್‌ ₹107.12, ಡೀಸೆಲ್‌ ₹98; ಚೆನ್ನೈನಲ್ಲಿ ಪೆಟ್ರೋಲ್‌ ₹103.26 ಮತ್ತು ಡೀಸೆಲ್‌ ₹99.68ಕ್ಕೆ ಮಾರಾಟವಾಗುತ್ತಿದೆ.

ಸೆಪ್ಟೆಂಬರ್‌ ಕೊನೆಯ ವಾರದ ನಂತರದಲ್ಲಿ ಪೆಟ್ರೋಲ್ ಬೆಲೆಯು 18 ಬಾರಿ, ಡೀಸೆಲ್ ಬೆಲೆಯು 21ಬಾರಿ ಹೆಚ್ಚಳ ಆಗಿದೆ.

ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಭಾರತವು 2020ರ ಜೂನ್‌ನಲ್ಲಿ 8.8 ಬಿಲಿಯನ್ ಅಮೆರಿಕನ್ ಡಾಲರ್ (₹ 65 ಸಾವಿರ ಕೋಟಿ) ವೆಚ್ಚ ಮಾಡುತ್ತಿತ್ತು. ಈಗ ಆ ಮೊತ್ತವು 24 ಬಿಲಿಯನ್ ಅಮೆರಿಕನ್ ಡಾಲರ್‌ಗೆ (₹ 1.79 ಲಕ್ಷ ಕೋಟಿ) ಏರಿಕೆಯಾಗಿದೆ. ಇದಕ್ಕೆ ಕಾರಣ ತೈಲ ಬೆಲೆಯಲ್ಲಿ ಆಗಿರುವ ಹೆಚ್ಚಳ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಅವರು ಬುಧವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT