ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್‌ಪಿಎಸ್‌: ವಹಿವಾಟಿನ ದಿನವೇ ಪಾವತಿಗೆ ಪಿಎಫ್‌ಆರ್‌ಡಿಎ ಅನುಮತಿ

Published 28 ಜೂನ್ 2024, 15:26 IST
Last Updated 28 ಜೂನ್ 2024, 15:26 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (ಎನ್‌ಪಿಎಸ್) ಚಂದಾದಾರರಿಗೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಜುಲೈ 1ರಿಂದ ಅನ್ವಯವಾಗುವಂತೆ ಟಿ+0 ಪಾವತಿ ಮಾಡಲು ಅನುಮತಿ ನೀಡಿದೆ.

ಬೆಳಿಗ್ಗೆ 11ರ ವರೆಗೆ ಟ್ರಸ್ಟಿ ಬ್ಯಾಂಕ್ ಸ್ವೀಕರಿಸಿದ ಎನ್‌ಪಿಎಸ್‌ ಕೊಡುಗೆಗಳನ್ನು ಅದೇ ದಿನದಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ಚಂದಾದಾರರು ಅದೇ ದಿನದ ನಿವ್ವಳ ಲಾಭವನ್ನು ಪಡೆಯುತ್ತಾರೆ. ಇದನ್ನೇ ಟಿ+0 ಎಂದು ಕರೆಯಲಾಗುತ್ತದೆ. 

ಇಲ್ಲಿಯವರೆಗೆ, ಟ್ರಸ್ಟಿ ಬ್ಯಾಂಕ್ ಸ್ವೀಕರಿಸಿದ ಕೊಡುಗೆಗಳನ್ನು ಮುಂದಿನ  ದಿನದಂದು (ಟಿ+1) ಹೂಡಿಕೆ ಮಾಡಲಾಗುತ್ತಿತ್ತು. ಅಂದರೆ ಹಿಂದಿನ ದಿನದವರೆಗೆ ಸ್ವೀಕರಿಸಿದ ಕೊಡುಗೆಗಳನ್ನು ಮರುದಿನ ಹೂಡಿಕೆ ಮಾಡಲಾಗುತ್ತಿತ್ತು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT