ಬೆಂಗಳೂರು: ಫೋನ್‌ಪೆ ಕಂಪನಿಯ ಅಂಗಸಂಸ್ಥೆಯಾಗಿರುವ ‘ಫೋನ್‌ಪೆ ಇನ್ಸುರೆನ್ಸ್ ಬ್ರೋಕಿಂಗ್ ಸರ್ವಿಸಸ್’, ಪ್ರಮುಖ ವಿಮಾ ಕಂಪನಿಗಳ ಜೊತೆ ಪಾಲುದಾರಿಕೆಯಲ್ಲಿ ಆರೋಗ್ಯ ವಿಮಾ ಸೇವೆಗಳನ್ನು ಒದಗಿಸಲು ಆರಂಭಿಸಿದೆ.
‘ಆರೋಗ್ಯ ವಿಮೆಗೆ ಪಾವತಿಯನ್ನು ಯುಪಿಐ ಮೂಲಕ ತಿಂಗಳ ಕಂತುಗಳಲ್ಲಿ ಕೂಡ ಮಾಡಬಹುದು. ಇದರಿಂದಾಗಿ ಗ್ರಾಹಕರಿಗೆ ಇವು ಹೆಚ್ಚು ಕೈಗೆಟಕುವಂತೆ ಆಗುತ್ತವೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
‘ಆರೋಗ್ಯ ವಿಮೆಗಳಿಗೆ ಮಾಡಬೇಕಿರುವ ವೆಚ್ಚವು, ಅವುಗಳ ಖರೀದಿಗೆ ಇರುವ ಅತಿದೊಡ್ಡ ಅಡ್ಡಿಗಳಲ್ಲಿ ಒಂದು. ಆದರೆ ನಾವು ತಿಂಗಳ ಪಾವತಿಗೆ ಹೆಚ್ಚಿನ ಗಮನ ನೀಡುವ ವ್ಯವಸ್ಥೆಯೊಂದನ್ನು ರೂಪಿಸಿದ್ದೇವೆ’ ಎಂದು ಫೋನ್‌ಪೆ ಕಂಪನಿಯ ಹಣಕಾಸು ಸೇವೆಗಳ ಉಪಾಧ್ಯಕ್ಷ ಹೇಮಂತ್ ಗಾಲಾ ಹೇಳಿದ್ದಾರೆ.