ಬೆಂಗಳೂರು: ದೇಶದ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಗ್ರಾಹಕರ ಹೆಚ್ಚುತ್ತಿರುವ ನಿರೀಕ್ಷೆಗಳನ್ನು ಈಡೇರಿಸಲು ಹೊಸ ವಲಯ ರಚಿಸಿದೆ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಂಡ ಹೊಸ ವಲಯವನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಮೂರೂ ರಾಜ್ಯಗಳ ಅಗತ್ಯ ಒದಗಿಸುವ ವಲಯ ಪ್ರಧಾನ ಕಚೇರಿಯು ಹೈದರಾಬಾದ್ನಲ್ಲಿ ಇರಲಿದೆ. ಅಶುತೋಷ್ ಚೌಧರಿ ಅವರು ವಲಯದ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ವಿಲೀನದ ನಂತರ ‘ಪಿಎನ್ಬಿ’ಯ ಒಟ್ಟಾರೆ ವಹಿವಾಟು ₹ 18 ಲಕ್ಷ ಕೋಟಿಗೆ ತಲುಪಿದೆ. ದೇಶದಾದ್ಯಂತ ಇರುವ ಶಾಖೆಗಳ ಸಂಖ್ಯೆ 12 ಸಾವಿರದಷ್ಟಿದೆ. ಹೊಸ ವಲಯದ ವ್ಯಾಪ್ತಿಯಲ್ಲಿ ಇರುವ 440 ಶಾಖೆಗಳ ಮೂಲಕ ರಿಟೇಲ್, ಎಂಎಸ್ಎಂಇ ಮತ್ತು ಕಾರ್ಪೊರೇಟ್ ವಲಯದ ಸಾಲದ ಅಗತ್ಯಗಳನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.