ಶುಕ್ರವಾರ, ಡಿಸೆಂಬರ್ 9, 2022
22 °C

ಪೂರ್ವಿಕಾದಿಂದ ದಸರಾ ಹಬ್ಬದ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೂರ್ವಿಕಾ ಮೊಬೈಲ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ದಸರಾ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿವಿಧ ರಿಯಾಯಿತಿ ಕೊಡುಗೆಗಳನ್ನು ಪ್ರಕಟಿಸಿದೆ.

ದಸರಾ ಮಾರಾಟದ ಭಾಗವಾಗಿ ‘ಶೇಕಡ 100ರಷ್ಟು ಕ್ಯಾಷ್‌ಬ್ಯಾಕ್‌ ಫೀಡ್‌ಬ್ಯಾಕ್‌ ಸ್ಪರ್ಧೆ’ ಆಯೋಜಿಸಿದೆ. ಗ್ರಾಹಕರು ಪೂರ್ವಿಕಾದಲ್ಲಿ ಖರೀದಿ ಮಾಡಬೇಕು. ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಿದ ಬಳಿಕ ತಮ್ಮ ಪ್ರತಿಕ್ರಿಯೆ ನೀಡಬೇಕು. ಹೀಗೆ ಮಾಡಿದ ನಂತರ ವಿಜೇತರಾಗುವ ಅವಕಾಶ ಪಡೆಯಬಹುದು. ಸ್ಯಾಮ್ಸಂಗ್‌ ಬ್ರ್ಯಾಂಡ್‌ ಇಷ್ಟಪಡುವವರು ಸ್ಯಾಮ್ಸಂಗ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ₹ 27 ಸಾವಿರವರೆಗೆ ರಿಯಾಯಿತಿ ಪಡೆಯಬಹುದು. ಒನ್‌ಪ್ಲಸ್‌ ಫೋನ್‌ ಖರೀದಿಸಿದರೆ ₹ 11 ಸಾವಿರವರೆಗೆ ರಿಯಾಯಿತಿ ಸಿಗಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಅಕ್ಸೆಸ್ಸರಿಗಳ ಮೇಲೆ ಶೇ 60ರವರೆಗೆ ರಿಯಾಯಿತಿ ಸಿಗಲಿದೆ. ₹ 1 ಡೌನ್‌ಪೇಮೆಂಟ್‌, ಮೆಗಾ ಎಕ್ಸ್‌ಚೇಂಜ್‌ ಕೊಡುಗೆ ಸೇರಿದಂತೆ ಹಲವು ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು