* ನಾನು ಸರ್ಕಾರಿ ನಿವೃತ್ತ ನೌಕರ. ನನ್ನ ಹೆಸರಿನಲ್ಲಿರುವ ಮನೆ ಮಾರಾಟ ಮಾಡಿ ಬರುವ ಹಣ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇರಿಸಬೇಕೆಂದಿದ್ದೇನೆ. ಕ್ಯಾಪಿಟಲ್ಗೇನ್ ಟ್ಯಾಕ್ಸ್ ಉಲ್ಲಂಘನೆ ಆಗುತ್ತದೆಯೇ ?

- ವಿ. ಸುರೇಶ್, ಕೋಡಿಚಿಕ್ಕನಹಳ್ಳಿ

ಉತ್ತರ: ಮನೆ ಮಾರಾಟ ಮಾಡಿ ಬಂದ ಲಾಭದಲ್ಲಿ ಹೊಸ ಆಸ್ತಿ ಕೊಂಡುಕೊಳ್ಳುವಾಗ ಕೊಟ್ಟ ಹಣ Cost of inflation indexನಿಂದ ಬರುವ ಮೊತ್ತ ಕಳೆದು ಉಳಿದ ಹಣಕ್ಕೆ Capital Gain Tax ತುಂಬದಿದ್ದರೆ ಅದು ಅಪರಾಧವಾಗುತ್ತದೆ. ದಂಡ ತೆರಬೇಕಾಗುತ್ತದೆ. ತೆರಿಗೆ ಉಳಿಸಲು ಗರಿಷ್ಠ ₹ 50 ಲಕ್ಷ National Highway Autharity of india or Rural Eletrication corporation ಬಾಂಡುಗಳಲ್ಲಿ 5 ವರ್ಷಗಳ ತನಕ ತೊಡಗಿಸಬಹುದು.

* ನಾನು ವಿಜ್ಞಾನಿ. ವಯಸ್ಸು 27. ಒಟ್ಟು ಸಂಬಳ ₹ 83,000. ನನಗೆ ಶಿಕ್ಷಣ ಸಾಲ ₹ 2 ಲಕ್ಷವಿದೆ. ಸಾಲ ತೀರಿಸಿ ನಿವೇಶನ ಕೊಳ್ಳಬೇಕೆಂದಿದ್ದೇನೆ. ₹ 25–35 ಲಕ್ಷ ಬೇಕಾದೀತು. ಗೃಹಸಾಲ ಎಷ್ಟು ವರ್ಷಗಳಿಗೆ ಪಡೆಯಲಿ. ₹ 5000 SIPನಲ್ಲಿ ತೊಡಗಿಸಬೇಕೆಂದಿದ್ದೇನೆ. ತೆರಿಗೆ ಉಳಿತಾಯದ ವಿಚಾರದಲ್ಲಿ ತಿಳಿಸಿ.

- ಮಧುಸೂಧನ್. ಎ.ಪಿ., ಬೆಂಗಳೂರು

ಉತ್ತರ: ನೀವು ಅವಿವಾಹಿತರು. ಇನ್ನೆರಡು ವರ್ಷಗಳಲ್ಲಿ ಮದುವೆಯಾಗುವ ಸಾಧ್ಯತೆ ಇದೆ. SIP ಬದಲಾಗಿ ₹ 10,000 ಎರಡು ವರ್ಷಗಳ ಅವಧಿಗೆ ಆರ್.ಡಿ. ಮಾಡಿ.

ಶಿಕ್ಷಣ ಸಾಲದ ಬಡ್ಡಿ ಸೆಕ್ಷನ್ 80E ಆಧಾರದ ಮೇಲೆ ನಿಮ್ಮ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಈ ಸಾಲ ಒಮ್ಮೆಲೇ ತೀರಿಸಬೇಡಿ. ನೀವು ಗೃಹ ಸಾಲ ಪಡೆಯುವುದಾದರೆ 30 ವರ್ಷಗಳ ಗರಿಷ್ಠ ಅವಧಿ ದೊರೆಯುತ್ತದೆಯಾದರೂ, 20 ವರ್ಷಗಳನ್ನು ಆಯ್ದುಕೊಳ್ಳಿ.

ಸೆಕ್ಷನ್ 80C ಆಧಾರದ ಮೇಲೆ ಜೀವವಿಮೆ, ಪಿಪಿಎಫ್ ಬ್ಯಾಂಕ್ ಠೇವಣಿ ವಾರ್ಷಿಕವಾಗಿ ₹ 1.50 ಲಕ್ಷ ಹೂಡಿಕೆ ಮಾಡಿ. ಸೆಕ್ಷನ್ 80CCD (1B) ಆಧಾರದ ಮೇಲೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ₹ 50,000 ವಾರ್ಷಿಕವಾಗಿ ಹೂಡಿರಿ. 80C ಹಾಗೂ 80CCD (1B) ಸೇರಿಸಿ ವಾರ್ಷಿಕವಾಗಿ ₹ 2 ಲಕ್ಷ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.