ಭಾನುವಾರ, ಮೇ 9, 2021
27 °C

ಪೆಟ್ರೋಲ್‌, ಡೀಸೆಲ್‌ ದರ ಅಲ್ಪ ಇಳಿಕೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತೈಲ ಮಾರಾಟ ಕಂಪನಿಗಳು ಮಂಗಳವಾರ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಕ್ರಮವಾಗಿ ಪ್ರತಿ ಲೀಟರ್‌ಗೆ 22 ಪೈಸೆ ಮತ್ತು 23 ಪೈಸೆ ಕಡಿಮೆ ಮಾಡಿವೆ.

ತೈಲ ಬೆಲೆ ಪರಿಷ್ಕರಣೆಯ ಬಳಿಕ ನವದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹ 90.56 ಮತ್ತು ಡೀಸೆಲ್‌ಗೆ ₹ 80.87 ಆಗಿದೆ. ಮುಂಬೈನಲ್ಲಿ ಪೆಟ್ರೋಲ್‌ಗೆ ₹ 96.98 ಮತ್ತು ಡೀಸೆಲ್‌ಗೆ ₹ 87.96, ಕೋಲ್ಕತ್ತದಲ್ಲಿ ಪೆಟ್ರೋಲ್‌ಗೆ ₹ 90.77, ಡೀಸೆಲ್‌ ಬೆಲೆ ₹ 83.75ಕ್ಕೆ ಇಳಿಕೆಯಾಗಿದೆ.

ಸುಯೆಜ್ ಕಾಲುವೆಯಲ್ಲಿ ಸರಕು ಸಾಗಣೆಯು ಮತ್ತೆ ಆರಂಭವಾದ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತುಸು ಇಳಿಕೆ ಆಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹ 93.59 ಮತ್ತು ಡೀಸೆಲ್‌ಗೆ ₹ 85.75ಕ್ಕೆ ಇಳಿದಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಸರ್ಕಾರ ಸುಂಕವನ್ನು ಹೆಚ್ಚಿಸಿದ ಬಳಿಕ ಪೆಟ್ರೋಲ್‌ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ₹ 21.58 ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ₹ 19.18 ಏರಿಕೆ ಕಂಡಿತ್ತು. ಕಳೆದ ತಿಂಗಳು ರಾಜಸ್ಥಾನ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ₹ 100 ದಾಟುವ ಮೂಲಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು.

ನಗರ–ಪೆಟ್ರೋಲ್‌ ದರ–ಡೀಸೆಲ್‌ ದರ

ಚೆನ್ನೈ– ₹92.58– ₹85.88
ಹೈದರಾಬಾದ್‌–₹94.16– ₹88.20
ಜೈಪುರ–₹97.08–₹89.35
ಲಖನೌ–₹88.85–₹81.27
ಪಟನಾ–₹92.89–₹86.12
ನೋಯ್ಡಾ– ₹88.91–₹81.33

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು