ನವದೆಹಲಿ: ಬಜೆಟ್ ಏರ್ಲೈನ್ ಎಂದೇ ಗುರುತಿಸಿಕೊಂಡಿರುವ ಸ್ಪೈಸ್ಜೆಟ್ ವಿಮಾನ ಸಂಸ್ಥೆಯ ಪ್ರವರ್ತಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಅವರು ₹52 ಕೋಟಿಗೆ ತಮ್ಮ ಬಳಿ ಇರುವ ಕಂಪನಿಯ ಶೇ 1ರಷ್ಟು ಷೇರನ್ನು ಮುಕ್ತ ಮಾರುಕಟ್ಟೆ ಮೂಲಕ ಗುರುವಾರ ಹಿಂಪಡೆದಿದ್ದಾರೆ.

ಬಿಎಸ್ಇ ಮಾಹಿತಿ ಪ್ರಕಾರ, ಅಜಯ್ ಸಿಂಗ್ ಅವರು ತಮ್ಮ ಬಳಿ ಇದ್ದುದರಲ್ಲಿ 1.15 ಕೋಟಿಯಷ್ಟು (ಶೇ 0.9ರಷ್ಟು) ಷೇರುಗಳನ್ನು ಮಾರಾಟ ಮಾಡಿದ್ದಾರೆ. ಪ್ರತಿ ಷೇರು ಸರಾಸರಿ ₹45.34ರಂತೆ ವಿಲೇವಾರಿ ಮಾಡಲಾಗಿದ್ದು, ಇವು ಮಾರುಕಟ್ಟೆಯಲ್ಲಿ ₹52.31 ಕೋಟಿಯನ್ನು ತಂದು ಕೊಟ್ಟಿವೆ.

ಈ ನಿರ್ಧಾರದಿಂದಾಗಿ ಸ್ಪೈಸ್ಜೆಟ್ನಲ್ಲಿ ಅಜಯ್ ಸಿಂಗ್ ಅವರ ಪಾಲು ಶೇ 22ಕ್ಕೆ ಕುಸಿದಿದೆ. ಜತೆಗೆ ಪ್ರವರ್ತಕರು ಹಾಗೂ ಕಂಪನಿಯ ಸಮೂಹದ ಒಟ್ಟು ಪಾಲು ಶೇ 29.13ರಿಂದ ಶೇ 28.23ಕ್ಕೆ ಕುಸಿದಿದೆ.

ಅಜಯ್ ಸಿಂಗ್ ಅವರ ಈ ನಿರ್ಧಾರದಿಂದಾಗಿ ಸ್ಪೈಸ್ಜೆಟ್ನ ಷೇರು ಮೌಲ್ಯವು ಶೇ 6.38ರಷ್ಟು ಕುಸಿತ ದಾಖಲಿಸಿದ್ದು, ಬಿಎಸ್ಇನಲ್ಲಿ ಪ್ರತಿ ಷೇರಿನ ಬೆಲೆ ₹45.48ರಷ್ಟು ದಾಖಲಾಯಿತು.

ಇದೇ ಅವಧಿಯಲ್ಲಿ ಐರ್ಲೆಂಡ್ ಮೂಲದ ಮೂವರು ವಿಮಾನ ಗುತ್ತಿಗೆದಾರರು ಮತ್ತು ಮಾಜಿ ಪೈಲೆಟ್ ಒಬ್ಬರು ರಾಷ್ಟ್ರೀಯ ಕಂಪನಿ ಕಾನೂನು ಮಂಡಳಿಯಲ್ಲಿ (ಎನ್ಸಿಎಲ್ಟಿ) ಧಾವೆ ಹೂಡಿದ್ದು, ಬಾಕಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ವಿಮಾನಗಳನ್ನು ಗುತ್ತಿದೆ ಆಧಾರದಲ್ಲಿ ನೀಡಿರುವ ಎನ್ಜಿಎಫ್ ಆಲ್ಫಾ, ಎನ್ಜಿಎಫ್ ಜೆನಿಸಿಸ್ ಮತ್ತು ಎನ್ಜಿಎಫ್ ಚಾರ್ಲಿ ಕಂಪನಿಗಳು ತಮಗೆ ಬರಬೇಕಿರುವ ₹110 ಕೋಟಿ ಬಾಕಿ ಹಣ ನೀಡುವಂತೆ ಸ್ಪೈಸ್ಜೆಟ್ ವಿರುದ್ಧ ಧಾವೆ ಹೂಡಿವೆ. ಇದೇ ಅವಧಿಯಲ್ಲಿ ಕಂಪನಿ ತನ್ನ ಷೇರುಗಳನ್ನು ಮಾರಾಟ ಮಾಡಿದೆ.

ಈ ವಿವಾದವನ್ನು ಕಂಪನಿಯು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಾಗಿ ಎನ್ಸಿಎಲ್ಟಿಗೆ ಪ್ರತಿಕ್ರಿಯಿಸಿದೆ.

ಕಳೆದ ತಿಂಗಳು ಕಂಪನಿಯು ₹26 ಕೋಟಿ ಲಾಭ ಗಳಿಸಿತ್ತು. ಆದರೆ ಕಳೆದ ಒಂದು ವರ್ಷದಲ್ಲಿ ಕಂಪನಿಯು ₹300 ಕೋಟಿ ನಷ್ಟ ಅನುಭವಿಸಿದೆ. 2024ರ ಸೆಪ್ಟೆಂಬರ್ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ₹1,077 ಕೋಟಿಗೆ ದಾಖಲಾಗಿದೆ. 2023ರಲ್ಲಿ ಕಂಪನಿಯ ಆದಾಯ ₹2,149ರಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.