ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ, ಕ್ರೆಡಾಯ್‌ ರಿಯಾಲ್ಟಿ ಎಕ್ಸ್‌ಪೊ

Last Updated 14 ಫೆಬ್ರುವರಿ 2020, 17:48 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ರಿಯಲ್ ಎಸ್ಟೇಟ್‌ ನಿರ್ಮಾಣಗಾರರ ಸಂಘಗಳ ಒಕ್ಕೂಟದ (ಕ್ರೆಡಾಯ್‌) ಕರ್ನಾಟಕ ಘಟಕವು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ಸಹಯೋಗದಲ್ಲಿ ಏರ್ಪಡಿಸಿರುವ ಮೂರು ದಿನಗಳ ‘ಡಬಲ್‌ ಅಶುರನ್ಸ್‌ ರಿಯಾಲ್ಟಿ ಎಕ್ಸ್‌ಪೊ’ಗೆ ಶುಕ್ರವಾರ ಇಲ್ಲಿ ಚಾಲನೆ ನೀಡಲಾಗಿದೆ.

ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿನ ಎಸ್‌ಬಿಐ ಪ್ರಧಾನ ಕಚೇರಿ ಆವರಣದಲ್ಲಿ ವಸತಿ ಯೋಜನೆಗಳ ಈ ಪ್ರದರ್ಶನ ನಡೆಯಲಿದೆ. ಫೆ. 16ರವರೆಗೆ ಈ ಪ್ರದರ್ಶನ ನಡೆಯಲಿದೆ. ಪ್ರವೇಶ ಉಚಿತವಾಗಿರಲಿದೆ.

ಕ್ರೆಡಾಯ್‌ ಸದಸ್ಯತ್ವ ಹೊಂದಿರುವ 25 ಮುಂಚೂಣಿ ಕಟ್ಟಡ ನಿರ್ಮಾಣ ಸಂಸ್ಥೆಗಳು ಈ ವಸತಿ ಯೋಜನೆಗಳ ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ. ಈ ಪ್ರತಿಷ್ಠಿತ ಸಂಸ್ಥೆಗಳು ನಗರದಲ್ಲಿ ಅಭಿವೃದ್ಧಿಪಡಿಸುತ್ತಿರುವ ಒಂದು ನೂರಕ್ಕೂ ಹೆಚ್ಚು ವಸತಿ ಯೋಜನೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.

ಇಷ್ಟವಾದ ಮನೆ ಖರೀದಿಸಲು ಮುಂದಾಗುವವರಿಗೆ ಸ್ಥಳದಲ್ಲಿಯೇ ಸಾಲ ಮಂಜೂರು ಮಾಡುವ ಸೌಲಭ್ಯವನ್ನು ಎಸ್‌ಬಿಐ ಒದಗಿಸಲಿದೆ. ಎಸ್‌ಬಿಐ ತನ್ನ ಆಕರ್ಷಕ ಗೃಹ ಸಾಲ ಯೋಜನೆಗಳಾದ ಮ್ಯಾಕ್ಸ್‌ ಗೇನ್‌, ಸರ್ಕಾರಿ ನೌಕರರು ಮತ್ತು ಸೇನಾ ಸಿಬ್ಬಂದಿಗಾಗಿ ಇರುವ ಪ್ರಿವಿಲೆಜ್‌ ಆ್ಯಂಡ್‌ ಶೌರ್ಯ ಮತ್ತು ಟಾಪ್‌ ಅಪ್‌ ಲೋನ್‌ಗಳನ್ನು ಒದಗಿಸಲಿದೆ.

ಎಕ್ಸ್‌ಪೊ ಸಂದರ್ಭದಲ್ಲಿ ಬ್ಯಾಂಕ್‌, ಶೇ 7.90ರ ಬಡ್ಡಿ ದರದ ಗೃಹ ಸಾಲ ಒದಗಿಸಲಿದೆ. ಸಾಲ ಮಂಜೂರಾತಿ ಪ್ರಕ್ರಿಯೆ ಶುಲ್ಕ ವಿನಾಯ್ತಿಯ ಕೊಡುಗೆ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT