ನವದೆಹಲಿ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ (ಪಿಎಸ್ಬಿ) ಲಾಭವು ₹2 ಲಕ್ಷ ಕೋಟಿ ದಾಟುವ ವಿಶ್ವಾಸ ಇದೆ’ ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ.ನಾಗರಾಜು ತಿಳಿಸಿದ್ದಾರೆ.

ದೇಶದ ಬ್ಯಾಂಕಿಂಗ್ ವಲಯವು ಉತ್ತಮ ಸ್ಥಿತಿಯಲ್ಲಿದೆ ಎಂದ ಅವರು, ‘ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಸಾಲ ನೀಡಿಕೆ ಹೆಚ್ಚಳದ ಪ್ರಮಾಣವು ಶೇ 12ರಷ್ಟು ಮತ್ತು ಠೇವಣಿ ಹೆಚ್ಚಳದ ಪ್ರಮಾಣವು ಶೇ 10ರಷ್ಟಿದೆ. ಇವೆರಡೂ ಉತ್ತಮ ಪ್ರಮಾಣ’ ಎಂದು ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್ನಿಂದ ಸೆಪ್ಟೆಂಬರ್) ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಒಟ್ಟು ₹1 ಲಕ್ಷ ಕೋಟಿ ಲಾಭ ಗಳಿಸಿವೆ. ಇದು ಈ ಆರ್ಥಿಕ ವರ್ಷ ಪೂರ್ಣಗೊಳ್ಳುವ ವೇಳೆಗೆ ₹2 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಈ ಬ್ಯಾಂಕ್ಗಳ ಲಾಭವು ದುಪ್ಪಟ್ಟಾಗಿದೆ. 2022–23ರ ಆರ್ಥಿಕ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ₹1.05 ಲಕ್ಷ ಕೋಟಿ ಲಾಭ ಗಳಿಸಿದ್ದವು. 2023–24ರಲ್ಲಿ ₹1.41 ಲಕ್ಷ ಕೋಟಿ ಮತ್ತು 2024–25ರಲ್ಲಿ ₹1.78 ಲಕ್ಷ ಕೋಟಿ ಲಾಭ ಗಳಿಸಿದ್ದವು.

ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ಬ್ಯಾಂಕ್ಗಳ ವಸೂಲಾಗದ ಸಾಲದ ಪ್ರಮಾಣ ಶೇ 2.30 ಮತ್ತು ನಿವ್ವಳ ಎನ್ಪಿಎ ಶೇ 3ರಷ್ಟಿದೆ. ಪಿಸಿಆರ್ ಶೇ 94.63ರಷ್ಟಾಗಿದ್ದು, ಸುಧಾರಣೆ ಕಂಡಿದೆ. ಬಂಡವಾಳ ಮೀಸಲು ಅನುಪಾತ ಶೇ 15.96ರಷ್ಟಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ₹34,990 ಕೋಟಿ ಡಿವಿಡೆಂಡ್ ಘೋಷಿಸಿವೆ. ಇದು 2023–24ರಲ್ಲಿ ₹27,830 ಕೋಟಿಯಷ್ಟಿತ್ತು.

ಎಫ್ಡಿಐ ಮಿತಿ ಹೆಚ್ಚಳಕ್ಕೆ ಪರಿಗಣನೆ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಬಂಡವಾಳ ಸ್ಥಿತಿ ಸದೃಢಗೊಳಿಸಲು ಪ್ರಸ್ತುತ ಇರುವ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಮಿತಿಯನ್ನು ಶೇ 20ರಿಂದ ಶೇ 49ಕ್ಕೆ ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವಾಲಯವು ಪರಿಶೀಲನೆ ನಡೆಸುತ್ತಿದೆ. ಇದಕ್ಕಾಗಿ ಅಂತರ ಸಚಿವಾಲಯದ ಸಮಾಲೋಚನೆ ನಡೆಯುತ್ತಿದೆ ಎಂದು ನಾಗರಾಜು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.