ಮಂಗಳವಾರ, ಜೂಲೈ 7, 2020
28 °C

ಹಿಂಗಾರು ಉತ್ಪಾದನೆ ಇಳಿಕೆ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದಲ್ಲಿ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಅಕಾಲಿಕ ಮಳೆಯ ಜತೆಗೆ ಲಾಕ್‌ಡೌನ್‌ ಜಾರಿಯಲ್ಲಿ ಇದ್ದ ಕಾರಣಕ್ಕೆ ಹಿಂಗಾರು ಹಂಗಾಮು ಉತ್ಪಾದನೆ ಇಳಿಕೆಯಾಗಲಿದೆ ಎಂದು ವರದಿಯೊಂದು ಹೇಳಿದೆ.

ಕೇಂದ್ರ ಸರ್ಕಾರವು ಹಿಂಗಾರು ಹಂಗಾಮಿನ ಮಧ್ಯಭಾಗದಲ್ಲಿ ಲಾಕ್‌ಡೌನ್‌ ಘೋಷಿಸಿತು. ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ಇದ್ದರೂ ಕಾರ್ಮಿಕರ ಕೊರತೆ ಮತ್ತು ಸಾರಿಗೆ ವ್ಯವಸ್ಥೆ ಇಲ್ಲದೇ ಇದ್ದಿದ್ದರಿಂದ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದು ನ್ಯಾಷನಲ್‌ ಬಲ್ಕ್‌ ಹ್ಯಾಂಡ್ಲಿಂಗ್‌ ಕಾರ್ಪೊರೇಷನ್‌ (ಎನ್‌ಬಿಎಚ್‌ಸಿ) ಅಂದಾಜು ಮಾಡಿದೆ.

ಇಳಿಕೆ ಸಾಧ್ಯತೆ (%)

ಎಣ್ಣೆಕಾಳು; 13.48

ಬೇಳೆಕಾಳು; 2.22

ಒರಟು ಧಾನ್ಯ; 1.95

ಗೋಧಿ; 3.12

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು