ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲಿ, ಅಚ್ಚು ತಯಾರಿಕೆ ಕಾರ್ಖಾನೆಯ ಗುರಿ ಮೀರಿ ಸಾಧನೆ

Last Updated 20 ಮಾರ್ಚ್ 2020, 18:53 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕದಲ್ಲಿ ಇರುವ ರೈಲ್ವೆ ಗಾಲಿ ಮತ್ತು ಅಚ್ಚು ತಯಾರಿಸುವ ಕಾರ್ಖಾನೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಗುರಿ ಮೀರಿ ಸಾಧನೆ ಮಾಡಿದೆ.

ರೈಲ್ವೆ ಮಂಡಳಿಯು 2019–20ರ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ್ದ 1,76,200 ಗಾಲಿ ತಯಾರಿಕೆಯ ಗುರಿ ಬದಲಿಗೆ, ಈ ತಿಂಗಳ 19ರ ವೇಳೆಗೆ 1,76,387 ಗಾಲಿಗಳನ್ನು ತಯಾರಿಸಲಾಗಿದೆ. ಅಚ್ಚುಗಳ ತಯಾರಿಕೆಯು 77 ಸಾವಿರ ಗುರಿ ಬದಲಿಗೆ 80,309ಕ್ಕೆ ತಲುಪಿದೆ. ಕಾರ್ಖಾನೆಯ ವಾರ್ಷಿಕ ವಹಿವಾಟು ₹ 1,448.50 ಕೋಟಿಗೆ ತಲುಪಿದೆ. 2018–19ರಲ್ಲಿ ₹ 993 ಕೋಟಿ ಮೊತ್ತದ ವಹಿವಾಟು ನಡೆದಿತ್ತು. ರೈಲ್ವೆ ಬೋಗಿಗಳು ಮತ್ತು ಎಂಜಿನ್‌ಗಳ ತಯಾರಿಕೆಯಲ್ಲಿನ ಹೆಚ್ಚಳದ ಕಾರಣಕ್ಕೆ ಗಾಲಿ ಮತ್ತು ಅಚ್ಚುಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಕಾರ್ಖಾನೆಯ ಜನರಲ್‌ ಮ್ಯಾನೇಜರ್‌ ರಾಜೀವ್‌ ಕುಮಾರ್‌ ವ್ಯಾಸ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT