ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಒಸಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿಯಾಗಿ ರಶ್ಮಿ ಗೋವಿಲ್‌ ನೇಮಕ

Published 19 ಮಾರ್ಚ್ 2024, 14:19 IST
Last Updated 19 ಮಾರ್ಚ್ 2024, 14:19 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ನ (ಐಒಸಿ) ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿಯಾಗಿ ರಶ್ಮಿ ಗೋವಿಲ್‌ ಅಧಿಕಾರ ಸ್ವೀಕರಿಸಿದ್ದಾರೆ. 

ಎಂಬಿಎ ಮತ್ತು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮೊ ವ್ಯಾಸಂಗ ಮಾಡಿರುವ ಅವರು, 1994ರಲ್ಲಿ ಕಂಪನಿಗೆ ಸೇರಿದರು. ಇಂಡಿಯನ್‌ ಆಯಿಲ್‌ ರಿಫೈನರೀಸ್‌ನ ಕೇಂದ್ರ ಕಚೇರಿ, ಮಥುರಾ ರಿಫೈನರಿ ಘಟಕ ಮತ್ತು ಕಂಪನಿಯ ಕಾರ್ಪೊರೇಟ್ ಕಚೇರಿಯಲ್ಲಿ ಕಾರ್ಯ ನಿರ್ವಾಹಕ ನಿರ್ದೇಶಕಿಯಾಗಿ (ಎಚ್‌ಆರ್‌ಡಿ ಮತ್ತು ಉದ್ಯೋಗಿ ಸಂಬಂಧಗಳು) ಸೇವೆ ಸಲ್ಲಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.

ಮೂರು ದಶಕದ ವೃತ್ತಿ ಅನುಭವ ಹೊಂದಿರುವ ಅವರು ನೇಮಕಾತಿ, ನೀತಿ ನಿರೂಪಣೆ, ಉತ್ತರಾಧಿಕಾರ ಯೋಜನೆ ಮತ್ತು ವ್ಯವಸ್ಥೆಗಳ ನಿರ್ವಹಣೆ ಸೇರಿದಂತೆ ಕಾರ್ಯದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ಕೊರೊನಾ ಸಮಯದಲ್ಲಿ ಉದ್ಯೋಗಿಗಳ ಯೋಗಕ್ಷೇಮದ ಮೇಲೆ ವಿಶೇಷ ಗಮನ ಕೇಂದ್ರೀಕರಿಸುವ ಮೂಲಕ ಹಲವಾರು ಪರಿಷ್ಕೃತ ನೀತಿಗಳನ್ನು ಕಾರ್ಯಗತಗೊಳಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.

ಈ ನೇಮಕದಿಂದ ಕಂಪನಿಯ ಮಂಡಳಿಯಲ್ಲಿ ಮಹಿಳಾ ಕಾರ್ಯಕಾರಿ ನಿರ್ದೇಶಕರ ಸಂಖ್ಯೆ 2ಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT