ಮುಂಬೈ: ಕೆಲ ತಿಂಗಳ ಹಿಂದೆ ಅಗಲಿದ್ದ ಟಾಟಾ ಸಮೂಹ ಸಂಸ್ಥೆಯ ಗೌರವ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರ ಕೊನೆಗಾಲದ ಗೆಳೆಯ ಹಾಗೂ ವ್ಯವಸ್ಥಾಪಕ ಶಾಂತನು ನಾಯ್ಡು ಅವರು ಟಾಟಾ ಮೋಟಾರ್ಸ್ನ ಪ್ರಧಾನ ವ್ಯವಸ್ಥಾಪಕ ಮತ್ತು ಕಾರ್ಯತಂತ್ರ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ತಮ್ಮ ಹೊಸ ಹುದ್ದೆ ಕುರಿತು ಶಾಂತನು ನಾಯ್ಡು ಅವರು ಸಾಮಾಜಿಕ ಮಾಧ್ಯಮ ಲಿಂಕ್ಡ್ಇನ್ ವೇದಿಕೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

‘ನನ್ನ ತಂದೆ ಟಾಟಾ ಮೋಟಾರ್ಸ್ನ ತಯಾರಿಕಾ ಘಟಕದಿಂದ ಮನೆಗೆ ನಡೆದು ಬರುತ್ತಿದ್ದ ದಿನಗಳು ಈಗ ನೆನಪಾಗುತ್ತಿವೆ. ಬಿಳಿ ಅಂಗಿ ಹಾಗೂ ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿ ಬರುತ್ತಿದ್ದ ತಂದೆಯ ಹಾದಿಯತ್ತ ಮನೆಯ ಕಿಟಕಿಯಿಂದಲೇ ನಿರೀಕ್ಷೆಯ ನೋಟ ನೆಟ್ಟಿರುತ್ತಿದ್ದೆ. ಇದೀಗ ಅದು ಪರಿಪೂರ್ಣಗೊಂಡಿದೆ ಎಂದೆನಿಸುತ್ತಿದೆ’ ಎಂದಿರುವ ಶಾಂತನು ಟಾಟಾ ನ್ಯಾನೊ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್ಗೆ ಸುಮಾರು 56 ಸಾವಿರ ಲೈಕ್ಗಳು ಮತ್ತು 5 ಸಾವಿರ ಜನರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪುಣೆಯ ಸಾವಿತ್ರಿಬಾಯಿ ಫುಲೆ ಕಾಲೇಜಿನಿಂದ ಎಂಜಿನಿಯರಿಂಗ್ ಪದವಿ ಪಡೆದಿರುವ ಶಾಂತನು, ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ವ್ಯಾಸಂಗ ಮಾಡಿದ್ದಾರೆ. 2018ರಲ್ಲಿ ಅವರು ಟಾಟಾ ಅವರ ಜತೆಗೂಡಿದರು.

ತಮ್ಮ ಕೊನೆಗಾಲದಲ್ಲಿ ವೃತ್ತಿಯನ್ನೂ ಮೀರಿ ನೆರವಾಗಿದ್ದ ಶಾಂತನು ನಾಯ್ಡು ಅವರ ಕುರಿತು ರತನ್ ಟಾಟಾ ಅವರು ತಮ್ಮ ವಿಲ್ನಲ್ಲಿ ಬರೆದಿದ್ದರು. ನಾಯ್ಡು ಅವರ ಶಿಕ್ಷಣಕ್ಕೆ ನೀಡಿದ್ದ ಸಾಲವನ್ನು ಮನ್ನಾ ಮಾಡಿದ್ದರು. ಹಿರಿಯ ನಾಗರಿಕರಿಗೆ ನೆರವಾಗುವ ಉದ್ದೇಶದಿಂದ ನಾಯ್ಡು ಆರಂಭಿಸಿದ್ದ ಸ್ಟಾರ್ಟ್ ಅಪ್ ಗುಡ್ಫೆಲೋಸ್ ಸಂಸ್ಥೆಯಲ್ಲಿದ್ದ ತಮ್ಮ ಷೇರುಗಳನ್ನು ಬಿಟ್ಟುಕೊಟ್ಟಿದ್ದರು.

2024ರ ಅ. 9ರಂದು ರತನ್ ನಿಧನರಾದರು. ‘ಈ ಗೆಳೆತನದಲ್ಲಿ ಈಗ ಸೃಷ್ಟಿಯಾಗಿರುವ ನಿರ್ವಾತವನ್ನು ಭರಿಸಲು ಜೀವನದ ಉಳಿದ ಭಾಗವನ್ನು ಮುಡಿಪಾಗಿಡುತ್ತೇನೆ. ಪ್ರೀತಿಗೆ ತೆರಬೇಕಾದ ಬೆಲೆ ದುಃಖ. ಗುಡ್ಬೈ ನನ್ನ ಲೈಟ್ಹೌಸ್’ ಎಂದು ಶಾಂತನು ಬರೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.