ಶುಕ್ರವಾರ, ಜುಲೈ 30, 2021
20 °C

ಹೊಸ ಗ್ರಾಹಕರ ಸೇರ್ಪಡೆಗೆ 'ಮಾಸ್ಟರ್‌ಕಾರ್ಡ್‌ಗೆ' ಆರ್‌ಬಿಐ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಮಾಸ್ಟರ್‌ಕಾರ್ಡ್‌ನ ಕ್ರೆಡಿಟ್‌ ಕಾರ್ಡ್‌ಗಳು–ಸಾಂದರ್ಭಿಕ ಚಿತ್ರ

ಮುಂಬೈ: ದೇಶದಲ್ಲಿ 'ಮಾಸ್ಟರ್‌ಕಾರ್ಡ್‌' ಕ್ರೆಡಿಟ್‌, ಡೆಬಿಟ್‌ ಹಾಗೂ ಪ್ರೀಪೇಯ್ಡ್‌ ಕಾರ್ಡ್‌ಗಳನ್ನು ಹೊಸ ಗ್ರಾಹಕರಿಗೆ ವಿತರಿಸುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧಿಸಿದೆ.

ದತ್ತಾಂಶ ಸಂಗ್ರಹ ನಿಯಮಗಳನ್ನು ಅನುಸರಿಸದ ಕಾರಣದಿಂದ ಮಾಸ್ಟರ್‌ಕಾರ್ಡ್‌ ಏಷ್ಯಾ ಪೆಸಿಫಿಕ್‌ ಮೇಲೆ ಆರ್‌ಬಿಐ ಬುಧವಾರ ನಿರ್ಬಂಧ ವಿಧಿಸಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಮಾಸ್ಟರ್‌ಕಾರ್ಡ್‌ ಗ್ರಾಹಕರಿಗೆ ಈ ಆದೇಶದಿಂದ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಆರ್‌ಬಿಐ ಹೇಳಿದೆ.

'ಪಾವತಿ ವ್ಯವಸ್ಥೆಯ ದತ್ತಾಂಶ ಸಂಗ್ರಹದಲ್ಲಿ ನಿರ್ದೇಶನಗಳ ಪಾಲನೆಯಾಗಿಲ್ಲ. ಸಾಕಷ್ಟು ಸಮಯ ಮತ್ತು ಅವಕಾಶಗಳನ್ನು ನೀಡಿದ್ದರೂ ಸಂಸ್ಥೆಯು ಸೂಕ್ತ ಕ್ರಮಕೈಗೊಂಡಿಲ್ಲ' ಎಂದು ಆರ್‌ಬಿಐ ಹೇಳಿದೆ.

ಹೊಸ ಗ್ರಾಹಕರ ಸೇರ್ಪಡೆಗೆ ಜುಲೈ 22ರಿಂದ ಆರ್‌ಬಿಐ ನಿರ್ಬಂಧಗಳು ಅನ್ವಯವಾಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು