ಮಂಗಳವಾರ, ಮಾರ್ಚ್ 28, 2023
31 °C

ಹಳೆಯ ನೋಟು ಖರೀದಿ ಆಮಿಷಕ್ಕೆ ಒಳಗಾಗದಿರಿ: ಆರ್‌ಬಿಐ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಕಮಿಷನ್ ಆಧಾರದ ಮೇಲೆ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಅನಧಿಕೃತ ಸಂಸ್ಥೆಗಳ ಮೋಸದ ಕೊಡುಗೆಗಳಿಗೆ ಬಲಿಯಾಗದಂತೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸಾರ್ವಜನಿಕರಿಗೆ ಬುಧವಾರ ಎಚ್ಚರಿಕೆ ನೀಡಿದೆ.

ಆನ್‌ಲೈನ್‌ ಮತ್ತು ಆಫ್‌ಲೈನ್‌ ವೇದಿಕೆಗಳ ಮೂಲಕ ಹಳೆಯ ನೋಟು ಹಾಗೂ ನಾಣ್ಯಗಳ ಮಾರಾಟ, ಖರೀದಿಗೆ ಸಂಬಂಧಿಸಿದಂತೆ ಆರ್‌ಬಿಐನ ಹೆಸರು ಬಳಸಿಕೊಂಡು ಶುಲ್ಕ ಕೇಳುತ್ತಿರುವುದು ಗಮನಕ್ಕೆ ಬಂದಿದೆ. ಇಂಥವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಆರ್‌ಬಿಐ ಇಂತಹ ಯಾವುದೇ ವಿಷಯದಲ್ಲಿ ತೊಡಗಿಕೊಂಡಿಲ್ಲ ಹಾಗೂ ಯಾವುದೇ ರೀತಿಯ ಶುಲ್ಕ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಈ ರೀತಿಯ ವಹಿವಾಟುಗಳಲ್ಲಿ ಆರ್‌ಬಿಐ ಪರವಾಗಿ ಶುಲ್ಕ ಅಥವಾ ಕಮಿಷನ್‌ ಸಂಗ್ರಹಿಸುವಂತೆ ಯಾವುದೇ ಸಂಘ, ಸಂಸ್ಥೆ, ವ್ಯಕ್ತಿಗೆ ಅಧಿಕಾರ ನೀಡಿಲ್ಲ ಎಂದೂ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು