ನವದೆಹಲಿ: 'ನಿಯಂತ್ರಣ ನಿಯಮಗಳ ಪಾಲನೆಯಲ್ಲಿ ನ್ಯೂನತೆ' ಕಂಡುಬಂದ ಹಿನ್ನೆಲೆಯಲ್ಲಿ ಹಾಂಗ್ಕಾಂಗ್ ಮತ್ತು ಶಾಂಘೈ ಬ್ಯಾಂಕಿಂಗ್ ಕೋ–ಆಪರೇಷನ್ ಲಿಮಿಟೆಡ್ಗೆ (ಎಚ್ಎಸ್ಬಿಸಿ) ₹ 1.74 ಕೋಟಿ (2.12 ಲಕ್ಷ ಡಾಲರ್) ದಂಡ ವಿಧಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸೋಮವಾರ ತಿಳಿಸಿದೆ.
ದೇಶದ ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋಗೆ ಮಾಹಿತಿ ಸಲ್ಲಿಸುವ ವಿಚಾರದಲ್ಲಿಯೂ ಎಚ್ಎಸ್ಬಿಸಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರ್ಬಿಐ ಮಾಹಿತಿ ನೀಡಿದೆ.