ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಟಿಎಂ ಪೇಮೆಂಟ್ಸ್ ‌ಬ್ಯಾಂಕ್‌ಗೆ ಹೊಸ ಗ್ರಾಹಕರ ಸೇರ್ಪಡೆಗೆ ಆರ್‌ಬಿಐ ನಿರ್ಬಂಧ

Last Updated 11 ಮಾರ್ಚ್ 2022, 15:38 IST
ಅಕ್ಷರ ಗಾತ್ರ

ಮುಂಬೈ: ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಹೊಸ ಖಾತೆಗಳನ್ನು ತೆರೆಯುವುದನ್ನು ನಿಲ್ಲಿಸುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಸೂಚಿಸಿದೆ. ಇದು ತಕ್ಷಣದಿಂದ ಜಾರಿಗೆ ಬರಬೇಕು ಎಂದು ಹೇಳಿದೆ.

'ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ 1949ರ ಸೆಕ್ಷೆನ್‌ 35ಎ ಅಡಿಯಲ್ಲಿ ಪೇಟಿಂಎ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌ ಹೊಸ ಗ್ರಾಹಕರ ಸೇರ್ಪಡೆಯನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಇಂದು ಸೂಚಿಸಲಾಗಿದೆ ' ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಪೇಮೆಂಟ್ಸ್‌ ಬ್ಯಾಂಕ್‌ನ ಐ.ಟಿ. ವ್ಯವಸ್ಥೆಯ ಆಮೂಲಾಗ್ರ ಪರಿಶೋಧನೆಗಾಗಿ ಐ.ಟಿ. ಕಂಪನಿಯೊಂದನ್ನು ನೇಮಕ ಮಾಡುವಂತೆಯೂ ಆರ್‌ಬಿಐ ತಾಕೀತು ಮಾಡಿದೆ. ‘ಐ.ಟಿ. ಪರಿಶೋಧನೆಯ ವರದಿಯನ್ನು ಪರಿಶೀಲಿಸಿದ ನಂತರ, ಆರ್‌ಬಿಐ ಕಡೆಯಿಂದ ನಿರ್ದಿಷ್ಟ ಒಪ್ಪಿಗೆ ದೊರೆತ ನಂತರ ಹೊಸದಾಗಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಅವಕಾಶ ಕೊಡಲಾಗುತ್ತದೆ’ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ.

2016ರ ಆಗಸ್ಟ್‌ನಲ್ಲಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಚಾಲನೆ ದೊರೆತಿತ್ತು ಹಾಗೂ ಅಧಿಕೃತವಾಗಿ 2017ರ ಮೇ ತಿಂಗಳು ನೋಯ್ಡಾ ಶಾಖೆಯಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು.

ಆರ್‌ಬಿಐ 2020ರ ಡಿಸೆಂಬರ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ವಿರುದ್ಧ ಕೆಲವು ಕಠಿಣ ಕ್ರಮಗಳನ್ನು ಜರುಗಿಸಿತ್ತು. ಈ ಬ್ಯಾಂಕ್‌ ಹೊಸದಾಗಿ ಡಿಜಿಟಲ್ ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ಬಿಡುಗಡೆ ಮಾಡುವಂತಿಲ್ಲ, ಹೊಸದಾಗಿ ಕ್ರೆಡಿಟ್ ಕಾರ್ಡ್ ವಿತರಣೆ ಮಾಡುವಂತೆ ಇಲ್ಲ ಎಂದು ಆರ್‌ಬಿಐ ತಾಕೀತು ಮಾಡಿತ್ತು. ತಾಂತ್ರಿಕ ಸಮಸ್ಯೆಗಳನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ ನಿವಾರಣೆ ಮಾಡಿದ ನಂತರವೇ ಈ ನಿರ್ಬಂಧಗಳನ್ನು ತೆರವುಗೊಳಿಸಬಹುದು ಎಂದು ಹೇಳಿತ್ತು.

ಪೇಟಿಎಂ ಕಂಪನಿಯ ಸಂಸ್ಥಾಪಕ ಆಗಿರುವ ವಿಜಯ್ ಶೇಖರ್ ಶರ್ಮ ಅವರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಶೇ 51ರಷ್ಟು ಷೇರುಪಾಲು ಹೊಂದಿದ್ದಾರೆ. ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಮಾತೃಸಂಸ್ಥೆಯಾಗಿರುವ ಒನ್‌97 ಕಮ್ಯುನಿಕೇಷನ್ಸ್‌ ಷೇರುಪೇಟೆಯಲ್ಲಿ ನೋಂದಣಿ ಆದ ಕೆಲವೇ ತಿಂಗಳುಗಳಲ್ಲಿ ಈ ಬೆಳವಣಿಗೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT