ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿನ್‌ಟೆಕ್‌ಗೆ ಸ್ವ–ನಿಯಂತ್ರಣ ಸಂಘಟನೆ ಅಗತ್ಯ: ಆರ್‌ಬಿಐ ಗವರ್ನರ್

Published 6 ಸೆಪ್ಟೆಂಬರ್ 2023, 15:29 IST
Last Updated 6 ಸೆಪ್ಟೆಂಬರ್ 2023, 15:29 IST
ಅಕ್ಷರ ಗಾತ್ರ

ಮುಂಬೈ: ಫಿನ್‌ಟೆಕ್‌ ಉದ್ಯಮದ ಬೆಳವಣಿಗೆಗೆ ನೆರವಾಗಲು ಸ್ವ–ನಿಯಂತ್ರಣ ಸಂಘಟನೆಯನ್ನು ಸ್ಥಾಪಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್‌ ಅವರು ಬುಧವಾರ ಸಲಹೆ ನೀಡಿದ್ದಾರೆ.

ಇಲ್ಲಿನ ಕಾನೂನಿಗೆ ಹೊಂದುವಂತೆ ಫಿನ್‌ಟೆಕ್‌ ಕಂಪನಿಗಳು ಉದ್ಯಮದಲ್ಲೇ ಉತ್ತಮವಾದ ಪದ್ಧತಿಗಳನ್ನು, ಖಾಸಗಿತನ ಮತ್ತು ದತ್ತಾಂಶ ರಕ್ಷಣೆಯ ನಿಯಮಗಳನ್ನು ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ನೈತಿಕ ವಹಿವಾಟಿನ ರೂಢಿಗಳು ಮತ್ತು ದರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಿಷ್ಟತೆಯನ್ನು ನಿಗದಿಪಡಿಸುವಂತೆಯೂ ಅವರು ಸಲಹೆ ನೀಡಿದ್ದಾರೆ.

ಜಾಗತಿಕ ಫಿನ್‌ಟೆಕ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಕಂಪನಿಯ ಉಳಿವು ಮತ್ತು ದೀರ್ಘಾವಧಿಯ ಯಶಸ್ಸಿಗೆ ಉತ್ತಮ ಆಡಳಿತವು ಬಹಳ ಮುಖ್ಯವಾಗಿದೆ ಎಂದಿದ್ದಾರೆ.

ಅಂದಾಜಿನ ಪ್ರಕಾರ ಫಿನ್‌ಟೆಕ್‌ ವಲಯದ ವರಮಾನವು 2030ರ ವೇಳೆಗೆ ₹16.63 ಲಕ್ಷ ಕೋಟಿಯಷ್ಟು ಆಗಲಿದೆ ಎಂದು ದಾಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT