ಡಿಜಿಟಲ್ ಕರೆನ್ಸಿ, ನಿರ್ಣಯ ಶೀಘ್ರ: ಡೆಪ್ಯುಟಿ ಗವರ್ನರ್ ಬಿ.ಪಿ. ಕನೂಂಗೊ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಡಿಜಿಟಲ್ ಕರೆನ್ಸಿ ಹೇಗಿರಬೇಕು ಎಂಬ ಬಗ್ಗೆ ಆರ್ಬಿಐ ಆಂತರಿಕ ಸಮಿತಿಯೊಂದು ಪರಿಶೀಲನೆ ನಡೆಸುತ್ತಿದ್ದು, ಈ ವಿಚಾರವಾಗಿ ಶೀಘ್ರವೇ ನಿರ್ಣಯವೊಂದು ಹೊರಬೀಳಲಿದೆ ಎಂದು ಡೆಪ್ಯುಟಿ ಗವರ್ನರ್ ಬಿ.ಪಿ. ಕನೂಂಗೊ ತಿಳಿಸಿದರು.
ಅಧಿಕೃತ ಡಿಜಿಟಲ್ ಕರೆನ್ಸಿಯನ್ನು ಹೊರಡಿಸುವ ಇರಾದೆ ಇದೆ ಎಂದು ಆರ್ಬಿಐ ಈಚೆಗೆ ಹೇಳಿತ್ತು. ‘ಡಿಜಿಟಲ್ ಕರೆನ್ಸಿ ವಿಚಾರವಾಗಿ ನಾವು ಪುಸ್ತಿಕೆಯೊಂದನ್ನು ಬಿಡುಗಡೆ ಮಾಡಿದ್ದೇವೆ. ಡಿಜಿಟಲ್ ಪಾವತಿ ಪುಸ್ತಿಕೆಯು, ಡಿಜಿಟಲ್ ಕರೆನ್ಸಿ ಕುರಿತ ಕೆಲಸ ನಡೆಯುತ್ತಿದೆ ಎಂಬುದನ್ನು ಹೇಳಿದೆ’ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗಾರರಿಗೆ ತಿಳಿಸಿದರು.
ಡಿಜಿಟಲ್ ಕರೆನ್ಸಿ ಸಿದ್ಧಪಡಿಸುವ ಘೋಷಣೆಯನ್ನು ಆರ್ಬಿಐನ ಹಣಕಾಸು ನೀತಿ ಸಮಿತಿಯು ಈ ಹಿಂದೆಯೇ ಮಾಡಿತ್ತು ಎಂದು ಕನೂಂಗೊ ಹೇಳಿದರು.
ಖಾಸಗಿ ಡಿಜಿಟಲ್ ಕರೆನ್ಸಿಗಳು, ವರ್ಚುವಲ್ ಕರೆನ್ಸಿಗಳು ಹಾಗೂ ಕ್ರಿಪ್ಟೊಕರೆನ್ಸಿಗಳು ಈಚಿನ ವರ್ಷಗಳಲ್ಲಿ ಜನಪ್ರಿಯತೆ ಗಳಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.