ನವದೆಹಲಿ: ರೂಪಾಯಿ ಹೆಚ್ಚಿನ ಕುಸಿತ ಕಾಣುವುದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಮೀಸಲು ಸಂಗ್ರಹದಲ್ಲಿ ₹2.74 ಲಕ್ಷ ಕೋಟಿಯನ್ನುಪ್ರಸಕ್ತ ಹಣಕಾಸು ವರ್ಷದ ಆರು ತಿಂಗಳಿನಲ್ಲಿ ಮಾರಾಟ ಮಾಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ.

ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ಕೇಂದ್ರೀಯ ಬ್ಯಾಂಕ್‌ಗಳಿಂದ ಬಿಗಿಯಾದ ಹಣಕಾಸು ನೀತಿಯ ಕಾರಣಗಳಿಂದಾಗಿ ಅಮೆರಿಕದ ಡಾಲರ್ ಮೌಲ್ಯವು 2022–23ರಲ್ಲಿ ನವೆಂಬರ್30ರವರೆಗೆ ಶೇ 7.8ರಷ್ಟು ಏರಿಕೆ ಕಂಡಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ಅವಧಿಯಲ್ಲಿ ರೂಪಾಯಿ ಮೌಲ್ಯವು ಶೇ 6.9ರಷ್ಟು ಇಳಿಕೆ ಆಗಿದೆ. ಹೀಗಿದ್ದರೂ ಏಷ್ಯಾದ ಇತರೆ ಕರೆನ್ಸಿಗಳಿಗಿಂತಲೂ ಭಾರತದ ರೂಪಾಯಿ ಉತ್ತಮ ಸ್ಥಿತಿಯಲ್ಲಿದೆ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.

ರಾಜ್ಯಗಳಿಗೆ ಜಿಎಸ್‌ಟಿ ಬಾಕಿ ಮೊತ್ತ ಪಾವತಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ಎಷ್ಟು ಮೊತ್ತ ಸಿಗಬೇಕು ಎನ್ನುವ ಕುರಿತು ಆಯಾ ರಾಜ್ಯಗಳ ಅಕೌಂಟೆಂಟ್ ಜನರಲ್ (ಎ.ಜಿ.) ಪ್ರಮಾಣಪತ್ರ ನೀಡಬೇಕು. ಪ್ರಮಾಣಪತ್ರ ಸಿಗುವುದು ತಡವಾದರೆ ಜಿಎಸ್‌ಟಿ ಪರಿಹಾರದ ಮೊತ್ತ ಪಾವತಿಯಲ್ಲಿ ವಿಳಂಬ ಆಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.