ಭಾನುವಾರ, ಜನವರಿ 17, 2021
17 °C

ಆ್ಯಪ್ ಮೂಲಕ ಸಾಲ: ಆರ್‌ಬಿಐ ಸಮಿತಿ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಡಿಜಿಟಲ್‌ ವೇದಿಕೆಗಳ ಮೂಲಕ ಸಾಲ ನೀಡುವ ವ್ಯವಸ್ಥೆಯನ್ನು ನಿಯಮಬದ್ಧವಾಗಿ ಬೆಳೆಸಲು ಅಗತ್ಯ ಸಲಹೆಗಳನ್ನು ನೀಡಲು ಆರ್‌ಬಿಐ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ. ‘ಕಾರ್ಯಕಾರಿ ಸಮಿತಿಯು, ಡಿಜಿಟಲ್ ಮಾಧ್ಯಮದ ಮೂಲಕ ಸಾಲ ನೀಡುವುದಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳ ಬಗ್ಗೆ ಅಧ್ಯಯನ ನಡೆಸಲಿದೆ’ ಎಂದು ಆರ್‌ಬಿಐ ಹೇಳಿದೆ.

ಆರ್‌ಬಿಐನ ಕಾರ್ಯನಿರ್ವಾಹಕ ಅಧ್ಯಕ್ಷ ಜಯಂತ್ ಕುಮಾರ್‌ ದಾಶ್ ಅವರು ಇದರ ಅಧ್ಯಕ್ಷರು. ಮೂರು ತಿಂಗಳಲ್ಲಿ ಇದು ವರದಿ ಸಲ್ಲಿಸಲಿದೆ. ಈ ಸಮಿತಿಯು, ಡಿಜಿಟಲ್ ಮಾಧ್ಯಮದ ಮೂಲಕ ಸಾಲ ನೀಡುವವರು ಪಾಲಿಸಬೇಕಿರುವ ನಿಯಮಗಳ ಬಗ್ಗೆ ಶಿಫಾರಸು ಮಾಡಲಿದೆ. ಹಾಗೆಯೇ, ಗ್ರಾಹಕರ ಹಿತರಕ್ಷಣೆಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೂಡ ಸೂಚಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು