ಶುಕ್ರವಾರ, ಜೂನ್ 25, 2021
22 °C

Reliance JioPhone: ಪ್ರತಿ ತಿಂಗಳೂ 300 ನಿಮಿಷಗಳ ಉಚಿತ ಕರೆ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Reuters photo

ಮುಂಬೈ: ದೇಶದ ಪ್ರಮುಖ ಖಾಸಗಿ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ, ಕೋವಿಡ್ ಸೋಂಕಿನ ಅವ‌ಧಿಯಲ್ಲಿ ಗ್ರಾಹಕರಿಗೆ ವಿಶೇಷ ಪ್ರಯೋಜನ ಘೋಷಿಸಿದೆ.

ರಿಲಯನ್ಸ್ ಜಿಯೋ ಫೋನ್ ಬಳಕೆದಾರರಿಗೆ ಪ್ರತಿ ತಿಂಗಳೂ ಉಚಿತ ಕರೆ ಸೌಲಭ್ಯ ದೊರೆಯಲಿದೆ.

ರಿಲಯನ್ಸ್ ಫೌಂಡೇಶನ್‌ ಜೊತೆಗೆ ಕೈಜೋಡಿಸಿರುವ ಜಿಯೋ, ಸದ್ಯದ ಜಾಗತಿಕ ಸೋಂಕಿನಿಂದಾಗಿ ರೀಚಾರ್ಜ್ ಮಾಡಿಸಲು ಸಾಧ್ಯವಾಗದ ಜಿಯೋಫೋನ್ ಬಳಕೆದಾರರಿಗೆ ಜಾಗತಿಕ ಸೋಂಕಿನ ಸಂಪೂರ್ಣ ಅವಧಿಗೆ ಪ್ರತಿ ತಿಂಗಳೂ 300 ಉಚಿತ ನಿಮಿಷಗಳಔಟ್‌ಗೋಯಿಂಗ್ ಕರೆಗಳನ್ನು (ದಿನಕ್ಕೆ 10 ನಿಮಿಷಗಳು) ಒದಗಿಸಲಿದೆ.

ಹೆಚ್ಚುವರಿಯಾಗಿ, ಅದು ಇನ್ನಷ್ಟು ಸುಲಭವಾಗಿ ಕೈಗೆಟುಕುವಂತೆ ಮಾಡಲು, ಜಿಯೋಫೋನ್ ಬಳಕೆದಾರರು ರೀಚಾರ್ಜ್ ಮಾಡಿದ ಪ್ರತಿ ಜಿಯೋಫೋನ್ ಪ್ಲಾನ್‌ಗೆ, ಅದೇ ಮೌಲ್ಯದಹೆಚ್ಚುವರಿ ರೀಚಾರ್ಜ್ ಪ್ಲಾನ್ ಅನ್ನು ಉಚಿತವಾಗಿ ಪಡೆಯುತ್ತಾರೆ. 

ಉದಾಹರಣೆಗೆ, ₹75 ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡುವ ಜಿಯೋಫೋನ್ ಬಳಕೆದಾರರು ₹75ರ  ಹೆಚ್ಚುವರಿ ಪ್ಲಾನ್ ಅನ್ನು ಸಂಪೂರ್ಣ ಉಚಿತವಾಗಿ ಪಡೆಯುತ್ತಾರೆ ಎಂದು ಜಿಯೋ ಪ್ರಕಟಣೆ ತಿಳಿಸಿದೆ.

ಈ ಕೊಡುಗೆ ವಾರ್ಷಿಕ ಅಥವಾ ಜಿಯೋಫೋನ್ ಡಿವೈಸ್ ಬಂಡಲ್ಡ್ ಪ್ಲಾನ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಕಂಪನಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು