ಬೆಂಗಳೂರು: ರಿಲಯನ್ಸ್ ಡಿಜಿಟಲ್‌ನಿಂದ ಆಗಸ್ಟ್ 18ರ ವರೆಗೆ ‘ಡಿಜಿಟಲ್ ಇಂಡಿಯಾ ಸೇಲ್’ ನಡೆಯಲಿದೆ. ಈ ಮಾರಾಟದಲ್ಲಿ ಗ್ರಾಹಕರು ರಿಯಾಯಿತಿ ದರದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬಹುದಾಗಿದೆ.
ರಿಲಯನ್ಸ್ ಡಿಜಿಟಲ್ ಮಳಿಗೆ ಮತ್ತು ಮೈ ಜಿಯೊ ಮಳಿಗೆಗಳಲ್ಲಿ ಗ್ರಾಹಕರಿಗೆ ಈ ಸೌಲಭ್ಯ ದೊರೆಯಲಿದೆ. ಶೇ 25ರ ವರೆಗೆ ರಿಯಾಯಿತಿ ಮತ್ತು ಇಎಂಐ ಸೌಲಭ್ಯ ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.
55 ಇಂಚಿನ ಯುಎಚ್‌ಡಿ ಟಿ.ವಿಯ ಆರಂಭಿಕ ಬೆಲೆ ₹29,900, ಐಫೋನ್ 13ರ ದರ ₹47,600, ಐಫೋನ್ 15ರ ಬೆಲೆ ₹63,600 ಆಗಿದೆ. ಇಂಟೆಲ್ ಕೋರ್ ಐ5 ಲ್ಯಾಪ್‌ಟಾಪ್ ₹39,999ಕ್ಕೆ ದೊರೆಯಲಿದೆ. ಹವಾ ನಿಯಂತ್ರಕಗಳಿಗೆ ₹6 ಸಾವಿರದ ವರೆಗೆ ರಿಯಾಯಿತಿ ಸಿಗಲಿದೆ ಎಂದು ತಿಳಿಸಿದೆ.