ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಕಂಪನಿಯು ಸಂಪೂರ್ಣವಾಗಿ ಸಾಲಮುಕ್ತವಾಗಲಿದೆ ಎಂದು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ನ ಅಧ್ಯಕ್ಷ ಅನಿಲ್ ಅಂಬಾನಿ ತಿಳಿಸಿದ್ದಾರೆ.

ಸದ್ಯ, ₹ 6 ಸಾವಿರ ಕೋಟಿ ಸಾಲ ಬಾಕಿ ಉಳಿಸಿಕೊಂಡಿರುವ ಕಂಪನಿಯು, ಸಾಲ ಕಡಿಮೆ ಮಾಡಿಕೊಳ್ಳಲು ಆಸ್ತಿಗಳನ್ನು ನಗದೀಕರಿಸುವ ಪ್ರಕ್ರಿಯೆ ಆರಂಭಿಸಿದೆ.

ಷೇರುದಾರರ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಆನ್ಲೈನ್ ಮೂಲಕ ಮಾತನಾಡಿದ ಅವರು, ‘ಕಂಪನಿಯು ಈ ವರ್ಷವೇ ಸಾಲದಿಂದ ಮುಕ್ತವಾಗಲಿದೆ’ ಎಂದಿದ್ದಾರೆ.

2018ರಲ್ಲಿ ಮುಂಬೈನಲ್ಲಿನ ಇಂಧನ ವಹಿವಾಟನ್ನು ಅದಾನಿ ಟ್ರಾನ್ಸ್ಮಿಷನ್ ಕಂಪನಿಗೆ ₹ 18,800 ಕೋಟಿಗೆ ಮಾರಾಟ ಮಾಡಲಾಗಿತ್ತು. ಆ ಮೂಲಕ ಸಾಲವು ₹ 7,500 ಕೋಟಿಗೆ ಇಳಿಕೆಯಾಗಿತ್ತು.

ದೆಹಲಿ–ಆಗ್ರಾ ಟೋಲ್ ರಸ್ತೆಯನ್ನು ಸಿಂಗಪುರದ ಕ್ಯೂಬ್ ಹೈವೇಸ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ಗೆ ₹ 3,600 ಕೋಟಿಗೆ ಮಾರಾಟ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾತ್ವಿಕ ಒಪ್ಪಿಗೆ ಪಡೆಯಲಾಗಿದೆ ಎಂದು ಈ ವರ್ಷದ ಜನವರಿಯಲ್ಲಿ ತಿಳಿಸಿತ್ತು.

‘ಕಂಪನಿಯು ₹ 65 ಸಾವಿರ ಕೋಟಿಗೂ ಅಧಿಕ ಮೊತ್ತದ ಸ್ವತ್ತನ್ನು ಹೊಂದಿದ್ದು, ₹ 11 ಸಾವಿರ ಕೋಟಿ ನಗದು ಇದೆ’ ಎಂದು ಅನಿಲ್ ತಿಳಿಸಿದ್ದಾರೆ.

‘ಎಂಜಿನಿಯರಿಂಗ್ ಮತ್ತು ನಿರ್ಮಾಣ ಯೋಜನೆಗಳು ಸಂಪೂರ್ಣವಾಗಿ ಕಾರ್ಯಾಚರಣೆ ನಡೆಸುತ್ತಿವೆ. 5 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.