ಬೆಂಗಳೂರು: ಕೃತಕ ಬುದ್ಧಿಮತ್ತೆ (ಎ.ಐ) ಬಳಕೆಯು ಹೆಚ್ಚಿನವರಿಗೆ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ರಾಜ್ಯದಾದ್ಯಂತ ‘ಸಮಗ್ರ ಎ.ಐ. ಶಿಕ್ಷಣ ಅಭಿಯಾನ’ ಆರಂಭಿಸಿರುವುದಾಗಿ ರಿಲಯನ್ಸ್ ಜಿಯೊ ಹೇಳಿದೆ.

ಡಿಜಿಟಲ್ ಒಳಗೊಳ್ಳುವಿಕೆಯನ್ನು ಹೆಚ್ಚಿಸುವ ಹಾಗೂ ‘ಜಿಯೊ ಎ.ಐ ಕ್ಲಾಸ್ರೂಮ್’ ಯೋಜನೆಯ ಮೂಲಕ ಪ್ರಾಯೋಗಿಕವಾಗಿ ಎ.ಐ ತರಬೇತಿ ನೀಡುವ ಗುರಿಯನ್ನು ಈ ಅಭಿಯಾನ ಹೊಂದಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

‘ಜಿಯೊ ಎ.ಐ ಕ್ಲಾಸ್ರೂಮ್ ಯೋಜನೆಯ ಮೂಲಕ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯ ಎ.ಐ ಕೌಶಲ ನೀಡಲಾಗುತ್ತಿದೆ. ಈ ಅಭಿಯಾನವು ಆರಂಭಿಕ ಹಂತದಲ್ಲೇ ಯಶಸ್ಸು ಕಂಡಿದ್ದು, ಕರ್ನಾಟಕದಾದ್ಯಂತ 1,000ಕ್ಕೂ ಹೆಚ್ಚು ಶಾಲೆಗಳನ್ನು ಇದು ತಲುಪಿದೆ. ಜಿಯೊದ ಹಿರಿಯ ಪ್ರತಿನಿಧಿಗಳು ನಡೆಸಿಕೊಡುತ್ತಿರುವ ಈ ವಿಶೇಷ ತರಬೇತಿಗಳಿಗೆ 10 ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ’ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಇದು ನಾಲ್ಕು ವಾರಗಳ ಉಚಿತ ಆನ್ಲೈನ್ ಸರ್ಟಿಫಿಕೇಷನ್ ಕಾರ್ಯಕ್ರಮ. ಈ ಕಾರ್ಯಕ್ರಮವು ವಿಡಿಯೊ ಉಪನ್ಯಾಸ, ಪಿಡಿಎಫ್ ಅಧ್ಯಯನ ಸಾಮಗ್ರಿ, ಪ್ರತಿ ಮಾಡ್ಯೂಲ್ನ ನಂತರ ಸಂವಾದಾತ್ಮಕ ರಸಪ್ರಶ್ನೆಗಳು ಹಾಗೂ ಅಸೈನ್ಮೆಂಟ್ಗಳನ್ನು ಒಳಗೊಂಡ ನಾಲ್ಕು ಹಂತಗಳ ಪಠ್ಯಕ್ರಮವನ್ನು ಹೊಂದಿದೆ. ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ‘ಕಂಪ್ಲೀಷನ್ ಬ್ಯಾಜ್’ ನೀಡಲಾಗುತ್ತದೆ.

ಕರ್ನಾಟಕದ ವಿದ್ಯಾರ್ಥಿಗಳು http://www.jio.com/ai-classroom ಪೋರ್ಟಲ್ಗೆ ಭೇಟಿ ನೀಡಬಹುದು ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.