ಮಂಗಳವಾರ, ಸೆಪ್ಟೆಂಬರ್ 21, 2021
23 °C

ಜಿಯೋಫೋನ್: ಒಂದು ರೀಚಾರ್ಜ್‌ಗೆ ಮತ್ತೊಂದು ರೀಚಾರ್ಜ್ ಉಚಿತ ಕೊಡುಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ರಿಲಯನ್ಸ್ ಜಿಯೋಫೋನ್ ಬಳಕೆದಾರರಿಗೆ ವಿಶೇಷ ರಿಚಾರ್ಜ್ ಕೊಡುಗೆಗಳನ್ನು ನೀಡುತ್ತಿದೆ.

ಒಂದು ರಿಚಾರ್ಜ್ ಮಾಡಿಸಿಕೊಂಡರೆ, ಅದೇ ಮೊತ್ತದ ಮತ್ತೊಂದು ರಿಚಾರ್ಜ್ ಗ್ರಾಹಕರಿಗೆ ದೊರೆಯಲಿದೆ. ಜಿಯೋಫೋನ್ ಪ್ರಿಪೇಯ್ಡ್ ಗ್ರಾಹಕರಿಗೆ ಮಾತ್ರ ಈ ಅವಕಾಶ ಲಭ್ಯವಾಗಲಿದೆ.

ಅಂದರೆ, ಬಳಕೆದಾರರು ₹39 ಮೌಲ್ಯದ ರಿಚಾರ್ಜ್ ಮಾಡಿಸಿಕೊಂಡರೆ, ಅವರಿಗೆ ₹39 ಮೊತ್ತದ ರಿಚಾರ್ಜ್ ಆಫರ್ ದೊರೆಯುತ್ತದೆ. ಜತೆಗೆ, ಈ ಮೊದಲು ಲಭ್ಯವಾಗುತ್ತಿದ್ದ 14 ದಿನಗಳ ವ್ಯಾಲಿಡಿಟಿ ಬದಲಾಗಿ, ಮತ್ತೆ ಹೆಚ್ಚುವರಿ 14 ದಿನಗಳ ವ್ಯಾಲಿಡಿಟಿ ದೊರೆಯಲಿದೆ.

ಯಾವೆಲ್ಲ ಪ್ಲ್ಯಾನ್‌ಗಳಿಗೆ ಜಿಯೋ ಕೊಡುಗೆ ಲಭ್ಯವಾಗಲಿದೆ..

₹39 ಮೌಲ್ಯದ ಜಿಯೋಫೋನ್ ರಿಚಾರ್ಜ್ ಮಾಡಿದ ಸಂದರ್ಭದಲ್ಲಿ, ಗ್ರಾಹಕರಿಗೆ ₹39 ಹೆಚ್ಚುವರಿ ರಿಚಾರ್ಜ್ ಕೊಡುಗೆ ದೊರೆಯಲಿದೆ.

₹69ರ ರಿಚಾರ್ಜ್ ಮಾಡಿಸಿದಾಗಲೂ, ಈಗಿರುವ 14 ದಿನದ ಬದಲು, ಹೆಚ್ಚುವರಿ 14 ದಿನ ವ್ಯಾಲಿಡಿಟಿ, ಇತರ ಪ್ರಯೋಜನ ದೊರಕುತ್ತದೆ.

₹75ರ ರಿಚಾರ್ಜ್‌ನಲ್ಲೂ ಗ್ರಾಹಕರಿಗೆ ವಿಶೇಷ ಆಫರ್ ಲಭ್ಯವಿದೆ.

₹125ರ ರಿಚಾರ್ಜ್ ಜತೆಗೆ ಒಂದು ಕೊಂಡರೆ ಒಂದು ಉಚಿತ ಆಫರ್ ಲಭ್ಯವಿದೆ.

₹155 ಜಿಯೋಫೋನ್ ರಿಚಾರ್ಜ್‌ಗೂ ಆಫರ್ ಇದ್ದು, ಬಳಕೆದಾರರು ಕೊಡುಗೆಯ ಪ್ರಯೋಜನ ಪಡೆಯಬಹುದು.

₹185 ಜಿಯೋ ರಿಚಾರ್ಜ್ ಜತೆಗೂ ಗ್ರಾಹಕರಿಗೆ ಆಫರ್ ಲಭ್ಯವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು