ಶುಕ್ರವಾರ, ಅಕ್ಟೋಬರ್ 23, 2020
26 °C

ರಿಲಯನ್ಸ್‌ ರಿಟೇಲ್‌ನಲ್ಲಿ ₹ 7,350 ಕೋಟಿ ಹೂಡಿಕೆ

‍ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತನ್ನ ರಿಟೇಲ್‌ ವಹಿವಾಟಿನ ಷೇರುಗಳನ್ನು ಜಿಐಸಿ ಮತ್ತು ಟಿಪಿಜಿ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ₹ 7,350 ಕೋಟಿ ಸಂಗ್ರಹಿಸುವುದಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಶನಿವಾರ ತಿಳಿಸಿದೆ.

ಜಿಐಸಿ ಕಂಪನಿಯು ಶೇ 1.22 ರಷ್ಟು ಷೇರುಗಳನ್ನು ಖರೀದಿಸುವ ಮೂಲಕ ₹ 5,512.5 ಕೋಟಿ ಹೂಡಿಕೆ ಮಾಡಿದ್ದು, ಟಪಿಜಿ ಕಂಪನಿಯು ಶೇ 0.41ರಷ್ಟು ಷೇರುಗಳನ್ನು ಖರೀದಿಸಿ ₹ 1,837.5 ಕೋಟಿ ಹೂಡಿಕೆ ಮಾಡಿದೆ ಎಂದು ರಿಲಯನ್ಸ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಸೆಪ್ಟೆಂಬರ್‌ 9 ರಿಂದ ಇಲ್ಲಿಯವರೆಗೆ ಶೇ 7.28 ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದು ₹ 32,197.50 ಕೋಟಿ ಸಂಗ್ರಹಿಸಿದೆ.

ರಿಲಯನ್ಸ್‌ ರಿಟೇಲ್‌ ದೇಶದಾದ್ಯಂತ 7 ಸಾವಿರ ಪಟ್ಟಣಗಳಲ್ಲಿ 12 ಸಾವಿರ ಮಳಿಗೆಗಳನ್ನು ಹೊಂದಿದೆ. ದಿನಸಿ, ಎಲೆಕ್ಟ್ರಾನಿಕ್ಸ್‌ ಮತ್ತು ಸಿದ್ಧ ಉಡುಪುಗಳನ್ನು ಮಾರಾಟ ಮಾಡುತ್ತಿದೆ. 2019–20ರಲ್ಲಿ ರಿಲಯನ್ಸ್‌ ರಿಟೇಲ್‌ನ ವರಮಾನ ₹ 1.63 ಲಕ್ಷ ಕೋಟಿ ಇತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು