ಗುರುವಾರ , ಜೂನ್ 4, 2020
27 °C
ಕಂಪನಿಯನ್ನು ಸಾಲದಿಂದ ಮುಕ್ತಗೊಳಿಸುವ ಯೋಜನೆ

ರಿಲಯನ್ಸ್‌ ಹಕ್ಕಿನ ಷೇರು ಮಾರಾಟ ಇದೇ 20ರಿಂದ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ಉದ್ದೇಶಿತ ಹಕ್ಕಿನ ಷೇರುಗಳ ಮಾರಾಟವು ಮೇ 20 ರಿಂದ ಜೂನ್‌ 3ರವರೆಗೆ ನಡೆಯಲಿದೆ. 

ಹಕ್ಕಿನ ಷೇರುಗಳ ಮಾರಾಟ ಮಾಡುವ ಮೂಲಕ ₹53,125 ಕೋಟಿ ಸಂಗ್ರಹಿಸಲು ಕಂಪನಿ ಕಂಪನಿಯು ಏಪ್ರಿಲ್‌ 30ರಂದು ಘೋಷಣೆ ಮಾಡಿತ್ತು. ಇದು ದೇಶದ ಅತಿದೊಡ್ಡ ಹಕ್ಕಿನ ಷೇರು ಆಗಿರಲಿದೆ.

ಕಂಪನಿಯು ಈ ಮುಂಚೆ 14ರಂದು ಷೇರು ಖರೀದಿಗೆ ಅರ್ಜಿ ಸಲ್ಲಿಸುವ ದಿನಾಂಕ ನಿಗದಿ ಮಾಡಿತ್ತು. ಆದರೆ, ಆಡಳಿತ ಮಂಡಳಿ ನಿರ್ದೇಶಕರ ಸಮಿತಿಯು ಮೇ 20 ರಿಂದ ಜೂನ್‌ 3ರವರೆಗೆ ಹಕ್ಕಿನ ಷೇರು ವಿತರಣೆಗೆ ಒಪ್ಪಿಗೆ ನೀಡಿದೆ ಎಂದು ಶನಿವಾರ ಷೇರುಪೇಟೆಗೆ ಮಾಹಿತಿ ನೀಡಿದೆ.

ಕಂಪನಿಯನ್ನು ಸಾಲದಿಂದ ಮುಕ್ತ ಗೊಳಿಸುವ ಯೋಜನೆಯ ಅಂಗವಾಗಿ ಈ ಕ್ರಮಕ್ಕೆ ಮುಂದಾಗಿದೆ. ಪ್ರತಿ 15 ಷೇರಿಗೆ ಒಂದು ಹಕ್ಕಿನ ಷೇರಿನ ರೂಪ ದಲ್ಲಿ (1;15) ಪ್ರತಿ ಒಂದು ಷೇರನ್ನು ₹ 1,257ರ ದರದಲ್ಲಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ. ಈ ಬೆಲೆಯು ಗುರುವಾರದ ಷೇರಿನ ಬೆಲೆಗಿಂತ ಶೇ 14ರಷ್ಟು ಕಡಿಮೆ (ಡಿಸ್ಕೌಂಟ್‌) ಇದೆ.

ಏನಿದು ಹಕ್ಕಿನ ಷೇರು: ಕಂಪನಿಯೊಂದು ತನ್ನ ಷೇರುದಾರರು ಹೊಂದಿರುವ ಷೇರುಗಳನ್ನು ಆಧರಿಸಿ, ಅನುಪಾತ ರೂಪದಲ್ಲಿ ಅವರಿಗೆ ವಿಶೇಷ ದರಕ್ಕೆ ಷೇರುಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸುವುದಕ್ಕೆ ಹಕ್ಕಿನ ಷೇರು ನೀಡಿಕೆ ಎನ್ನುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು