ಸೋಮವಾರ, ಸೆಪ್ಟೆಂಬರ್ 27, 2021
21 °C

ಇಂಧನ ಕ್ಷೇತ್ರದಲ್ಲಿ ರಿಲಯನ್ಸ್‌ನಿಂದ ₹ 75 ಸಾವಿರ ಕೋಟಿ ಹೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಹೊಸ ಇಂಧನ ಉದ್ದಿಮೆಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ₹ 75 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗುರುವಾರ ಪ್ರಕಟಿಸಿದೆ.

ಕಂಪನಿಯ ಈ ಹೂಡಿಕೆಯ ಮೂಲಕ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಬಳಸುವ ಸಾಧನಗಳ ತಯಾರಿಕಾ ಘಟಕ ಆರಂಭಿಸಲಿದೆ, ಬ್ಯಾಟರಿ ಕಾರ್ಖಾನೆ ಶುರು ಮಾಡಲಿದೆ ಎಂದು ಕಂಪನಿಯ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರಿಗೆ ತಿಳಿಸಿದರು. 2030ರೊಳಗೆ ಕಂಪನಿಯು ಒಟ್ಟು 100 ಗಿಗಾವಾಟ್‌ ಸೌರವಿದ್ಯುತ್ ಉತ್ಪಾದನಾ ಘಟಕವನ್ನು ಆರಂಭಿಸಲಿದೆ.

‘2035ರೊಳಗೆ ರಿಲಯನ್ಸ್ ಶೂನ್ಯ ಪ್ರಮಾಣದಲ್ಲಿ ಇಂಗಾಲ ಹೊರಸೂಸುವ ಕಂಪನಿ ಆಗಲಿದೆ ಎಂದು ಹಿಂದಿನ ವರ್ಷ ನಾನು ಘೋಷಿಸಿದ್ದೆ. ಈ ಗುರಿಯನ್ನು ತಲುಪಲು ಸಿದ್ಧಪಡಿಸಿರುವ ಕಾರ್ಯಯೋಜನೆಯನ್ನು ನಾನು ನಿಮ್ಮ ಮುಂದೆ ಇರಿಸುತ್ತಿದ್ದೇನೆ. ಜಗತ್ತಿನ ಆರ್ಥಿಕ ಬೆಳವಣಿಗೆಗೆ ಮೂರು ಶತಮಾನಗಳಿಂದ ಚಾಲಕ ಶಕ್ತಿಯಾಗಿದ್ದ ಪಳೆಯುಳಿಕೆ ಇಂಧನಗಳ ಬಳಕೆ ಹೆಚ್ಚು ಕಾಲ ಮುಂದುವರಿಯಲಾರದು’ ಎಂದು ಅಂಬಾನಿ ಅವರು ಹೇಳಿದರು.

ವಿದ್ಯುತ್ ಮಾತ್ರವೇ ಅಲ್ಲದೆ, ವಾಹನಗಳಲ್ಲಿ ಇಂಧನವಾಗಿ ಬಳಕೆ ಮಾಡಬಹುದಾದ ಹೈಡ್ರೋಜನ್ ಉತ್ಪಾದನೆಯಲ್ಲಿ ಕೂಡ ತೊಡಗಿಸಿಕೊಳ್ಳುವ ಇರಾದೆ ಕಂಪನಿಗೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು