ನವದೆಹಲಿ: ಗ್ರಾಹಕರಿಂದ ಸೇವಾ ಶುಲ್ಕ ಸಂಗ್ರಹಿಸಿದ 27 ರೆಸ್ಟೊರೆಂಟ್ಗಳ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಮ ಜರುಗಿಸಲಾಗಿದೆ ಎಂದು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಶನಿವಾರ ತಿಳಿಸಿದೆ.

ಈ ರೆಸ್ಟೊರೆಂಟ್ಗಳಿಗೆ ₹50 ಸಾವಿರದವರೆಗೆ ದಂಡ ವಿಧಿಸಲಾಗಿದೆ. ಅಲ್ಲದೆ, ಗ್ರಾಹಕರಿಂದ ಸಂಗ್ರಹಿಸಿದ ಸೇವಾ ಶುಲ್ಕವನ್ನು ಅವರಿಗೆ ಮರುಪಾವತಿ ಮಾಡುವಂತೆ ಮತ್ತು ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದೆ.

ಗ್ರಾಹಕರ ಸಹಾಯವಾಣಿಗೆ ಬಂದ ದೂರುಗಳನ್ನು ಆಧರಿಸಿ ನಡೆಸಿದ ತನಿಖೆಯಲ್ಲಿ ದೇಶದ ಹಲವೆಡೆ ರೆಸ್ಟೊರೆಂಟ್ಗಳು ಈ ನ್ಯಾಯಸಮ್ಮತವಲ್ಲದ ವ್ಯಾಪಾರ ನಡೆಸುತ್ತಿವೆ ಎಂಬುದು ಗೊತ್ತಾಗಿದೆ. ರೆಸ್ಟೊರೆಂಟ್ಗಳು ನೀಡಿದ ಬಿಲ್ನಲ್ಲಿ ಸೇವಾ ಶುಲ್ಕ ನಮೂದಾಗಿದೆ.

ಪಟ್ನಾದ ಕೆಫೆ ಬ್ಲೂ ಬಾಟಲ್, ಮುಂಬೈನ ಚೀನಾ ಗೇಟ್ ರೆಸ್ಟೊರೆಂಟ್ ಪ್ರೈವೆಟ್ ಲಿಮಿಟೆಡ್ (ಬೋರಾ ಬೋರಾ) ಸೇರಿದಂತೆ ಹಲವಾರು ರೆಸ್ಟೊರೆಂಟ್ಗಳು ಶೇ 10ರಷ್ಟು ಸೇವಾ ಶುಲ್ಕವನ್ನು ಬಿಲ್ ಜೊತೆ ವಿಧಿಸುತ್ತಿವೆ ಎಂದು ಹೇಳಿದೆ.

ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುವುದು 2019ರ ಗ್ರಾಹಕರ ರಕ್ಷಣಾ ಕಾಯ್ದೆ ಮತ್ತು ಸಿಸಿಪಿಎ ಮಾರ್ಗಸೂಚಿಗಳ ಉಲ್ಲಂಘನೆ ಎಂದು ಇತ್ತೀಚೆಗೆ ದೆಹಲಿ ಹೈಕೋರ್ಟ್ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.