ಭಾನುವಾರ, ಜೂಲೈ 5, 2020
26 °C

ರಿಲಯನ್ಸ್‌ ಮಾರುಕಟ್ಟೆ ಮೌಲ್ಯ ₹10 ಲಕ್ಷ ಕೋಟಿಗೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ : ಹಕ್ಕಿನ ಷೇರು ವಿತರಣೆ ಯಶಸ್ವಿಯಾಗಿರುವುದರಿಂದ ರಿಲಯನ್ಸ್‌ ಇಂಡಸ್ಟ್ರೀಸ್‌ನ (ಆರ್‌ಐಎಲ್‌) ಷೇರು ಶೇ 2.4ರಷ್ಟು ಏರಿಕೆಯಾಗಿ ಮಾರುಕಟ್ಟೆ ಮೌಲ್ಯವು ₹ 10 ಲಕ್ಷ ಕೋಟಿಗೆ ತಲುಪಿದೆ.

ಬಿಎಸ್‌ಇನಲ್ಲಿ ಗುರುವಾರ ಪ್ರತಿ ಷೇರಿನ ಬೆಲೆ ₹ 1,579ಕ್ಕೆ ತಲುಪಿತು. ಈ ಹಿಂದೆ 2020ರ ಮೇ 11ರಂದು ಷೇರಿನ ಬೆಲೆಯು ಈ ಮಟ್ಟವನ್ನು ತಲುಪಿತ್ತು.

 ಕಂಪನಿಯು ₹ 53,124 ಕೋಟಿ ಮೊತ್ತದ ಹಕ್ಕಿನ ಷೇರು ವಿತರಣೆ ಮಾಡಿತ್ತು. ಇದು 10 ವರ್ಷಗಳಲ್ಲಿಯೇ ಹಣಕಾಸೇತರ ಕಂಪನಿಯೊಂದರ ಅತಿದೊಡ್ಡ ವಿತರಣೆ ಆಗಿದೆ.

ಹಕ್ಕಿನ ಷೇರು ವಿತರಣೆ ಪ್ರಕ್ರಿಯೆಯು 34 ದಿನಗಳಲ್ಲಿ ಅಂತ್ಯವಾಗಿದ್ದು, ಹೂಡಿಕೆದಾರರು ₹ 84 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹೂಡಿಕೆಗೆ ಬದ್ಧತೆ ತೋರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.