ಹೈದರಾಬಾದ್: ಬೇರೆ ರಾಜ್ಯಗಳ ತೋತಾಪುರಿ ಮಾವಿನ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ ನಂತರವೂ, ತನ್ನ ನಿಲುವಿನಲ್ಲಿ ಬದಲಾವಣೆ ತರದೆ ಇರಲು ಆಂಧ್ರಪ್ರದೇಶ ಸರ್ಕಾರವು ತೀರ್ಮಾನಿಸಿರುವಂತಿದೆ.

ಏಕೆಂದರೆ, ನಿರ್ಬಂಧ ವಿಧಿಸಿರುವ ಕ್ರಮವು ಆಂಧ್ರಪ್ರದೇಶದ ರೈತರ ಹಿತಾಸಕ್ತಿಗಳನ್ನು ಕಾಪಾಡುತ್ತದೆ ಎಂದು ಸರ್ಕಾರ ಭಾವಿಸಿದೆ. ಕರ್ನಾಟಕದ ರೈತರು ಚಿತ್ತೂರಿನ ಸಂಸ್ಕರಣಾ ಘಟಕಗಳಿಗೆ ಕೆ.ಜಿ. ₹5ರಂತೆ ಮಾವು ಮಾರಾಟ ಮಾಡುವುದು ಆಂಧ್ರಪ್ರದೇಶದ ರೈತರ ಹಿತಾಸಕ್ತಿಗೆ ಪೆಟ್ಟು ಕೊಡುವಂತಿದೆ ಎಂದು ಆಂಧ್ರ ಸರ್ಕಾರವು ಭಾವಿಸಿದೆ.

ಕರ್ನಾಟಕದಿಂದ ಬರುವ ಮಾವಿಗೆ ನಿಷೇಧ ವಿಧಿಸುವುದು ಅಗತ್ಯವಾಗಿತ್ತು. ನಿಷೇಧ ಹೇರದೆ ಇದ್ದಿದ್ದರೆ ಆಂಧ್ರಪ್ರದೇಶದ ರೈತರು ಪ್ರತಿಭಟನೆಗೆ ಮುಂದಾಗುತ್ತಿದ್ದರು, ಇದರಿಂದಾಗಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇತ್ತು ಎಂದು ಆಂಧ್ರಪ್ರದೇಶ ಸರ್ಕಾರದ ಮೂಲಗಳು ಹೇಳಿವೆ.

ಬೇರೆ ರಾಜ್ಯಗಳ ತೋತಾಪುರಿ ಮಾವು ಚಿತ್ತೂರಿಗೆ ತರುವಂತಿಲ್ಲ ಎಂದು ಅಲ್ಲಿನ ಜಿಲ್ಲಾಧಿಕಾರಿ ಜೂನ್ 7ರಂದು ಆದೇಶಿಸಿದ್ದಾರೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದ ರೈತರು ಚಿತ್ತೂರಿನ ಸಂಸ್ಕರಣಾ ಘಟಕಗಳಿಗೆ ಕೆ.ಜಿ.ಗೆ ₹8ರಂತೆ ತೋತಾಪುರಿ ಮಾವು ಪೂರೈಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.