ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ವಿರುದ್ಧ ಹೋರಾಡಲು ₹42,000 ಕೋಟಿ ಸಾಲ ಪಡೆದ ಭಾರತ: ಆರ್‌ಟಿಐ ಬಹಿರಂಗ

Last Updated 18 ಜನವರಿ 2021, 2:48 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-19 ಪಿಡುಗಿನ ವಿರುದ್ಧ ಹೋರಾಡಲು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಹಾಗೂ ಇತರೆ ದೇಶಗಳಿಂದ ಸುಮಾರು ₹41,746 ಕೋಟಿ ಸಾಲವನ್ನು ಭಾರತ ಸರ್ಕಾರ ಪಡೆದುಕೊಂಡಿದೆ ಎಂಬುದು ಆರ್‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಫ್ರಾನ್ಸ್ ಹಾಗೂ ಜಪಾನ್ ಸೇರಿದಂತೆ ಐದು ವಿದೇಶಿ ಸಂಸ್ಥೆಗಳಿಂದ ₹52,246 ರೂ. ಸಾಲವನ್ನು ಭಾರತ ಪಡೆದಿದೆ ಎಂಬುದು ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಸಂಗ್ರಹಿಸಿದ ಮಾಹಿತಿಯಿಂದಬಯಲಾಗಿದೆ.

ಜಪಾನ್ ಹಾಗೂ ಫ್ರಾನ್ಸ್ ಹೊರತಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್, ಇಂಟರ್‌ನ್ಯಾಷನಲ್ ಬ್ಯಾಂಕ್ ಫಾರ್ ರಿಕನ್ಸ್ಟ್ರಕ್ಷನ್ ಆ್ಯಂಡ್ ಡೆವಲಪ್‌ಮೆಂಟ್, ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ ಅಸೋಸಿಯೇಷನ್, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್‌ಗಳಿಂದ ಭಾರತ ಸಾಲವನ್ನು ಪಡೆದುಕೊಂಡಿದೆ ಎಂದು ತಿಳಿಸಿದೆ.

ಈ ಪೈಕಿ ಶೇಕಡಾ 80ರಷ್ಟು ಮೊತ್ತವನ್ನು (₹41,746 ಕೋಟಿ) ಭಾರತಕ್ಕೆ ವರ್ಗಾಯಿಸಲಾಗಿದೆ. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ ಅಸೋಸಿಯೇಷನ್, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಫ್ರಾನ್ಸ್‌ನಿಂದ ಪಡೆದ ಸಾಲವನ್ನು ವಿತರಿಸಲಾಗಿದೆ. ಇಂಟರ್‌ನ್ಯಾಷನಲ್ ಬ್ಯಾಂಕ್ ಫಾರ್ ರಿಕನ್ಸ್ಟ್ರಕ್ಷನ್ ಆ್ಯಂಡ್ ಡೆವಲಪ್‌ಮೆಂಟ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ನಿಂದ ಸಾಲವನ್ನು ಭಾಗಶಃ ವಿತರಿಸಲಾಗಿದೆ. ಅಲ್ಲದೆ ಜಪಾನ್‌ನಿಂದ ಪಡೆದ ಸಾಲವನ್ನು ಇಲ್ಲಿಯ ವರೆಗೆ ವಿತರಿಸಲಾಗಿಲ್ಲ.

ಆದರೆ ಆಶ್ಚರ್ಯಕರವೆಂಬಂತೆ ಸರ್ಕಾರವು ಈಗಾಗಲೇ ಅಂತರರಾಷ್ಟ್ರೀಯ ಬ್ಯಾಂಕ್‌ಗಳಿಂದ ಪಡೆದಿರುವ ಸಾಲಕ್ಕಿಂತಲೂಶೇಕಡ 4ರಷ್ಟು ಹೆಚ್ಚು ಬಳಕೆ ಮಾಡಿದೆ. ಸಾಲ ನೀಡಿರುವ ಮೊತ್ತದಲ್ಲಿ ಕಿರು, ಸಣ್ಣ, ಮಧ್ಯಮ ವರ್ಗದ ಉದ್ಯಮಗಳ ಬೆಂಬಲಕ್ಕಾಗಿ ₹5620 ಕೋಟಿ ಸೇರಿವೆ. 2016ರಲ್ಲಿ ನೋಟು ನಿಷೇಧ ಬಳಿಕ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ ವಲಯ ಇದಾಗಿದೆ.

ಈ ಸಾಲ ಮೊತ್ತ ಕೋವಿಡ್-19 ಸಾಂಕ್ರಾಮಿಕ ರೋಗ ಹರಡಿದ ಬಳಿಕ ಬಳಿಕ ಮಾರ್ಚ್ 2020ರಲ್ಲಿ ರಚಿಸಲಾದ 'ಪಿಎಂ-ಕೇರ್ಸ್' ನಿಧಿ ಸಂಗ್ರಹದಿಂದ ಹೊರತಾಗಿದೆ. ಇದನ್ನು ಭವಿಷ್ಯದಲ್ಲೂ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಹಾಗೂ ಪರಿಹಾರಕ್ಕಾಗಿ ಬಳಕೆ ಮಾಡಲಾಗುತ್ತದೆ.

ಪಿಎಂ ಕೇರ್ಸ್-ಫಂಡ್ ಇನ್ನಷ್ಟೇ ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ವ್ಯಾಪ್ತಿಗೆ ಬರಬೇಕಿದೆ. ಮೂಲಗಳ ಪ್ರಕಾರ ಪಿಎಂ-ಕೇರ್ಸ್ ನಿಧಿಯಲ್ಲಿ ₹10,000 ಕೋಟಿಗಿಂತಲೂ ಹೆಚ್ಚು ಮೊತ್ತ ಸಂಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT