ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಿಂದ ಭಾರತಕ್ಕೆ ತೈಲ ರಫ್ತು 22 ಪಟ್ಟು ಏರಿಕೆ

Last Updated 28 ಮಾರ್ಚ್ 2023, 14:20 IST
ಅಕ್ಷರ ಗಾತ್ರ

ಮಾಸ್ಕೊ: 2022ರಲ್ಲಿ ರಷ್ಯಾ ದೇಶವು ಭಾರತಕ್ಕೆ ರಫ್ತು ಮಾಡುವ ಕಚ್ಚಾ ತೈಲದ ಪ್ರಮಾಣವು 22 ಪಟ್ಟು ಹೆಚ್ಚಳ ಕಂಡಿದೆ ಎಂದು ರಷ್ಯಾದ ಉಪ ಪ್ರಧಾನಿ ಮಂಗಳವಾರ ಹೇಳಿದ್ದಾರೆ.

ರಷ್ಯಾ–ಉಕ್ರೇನ್ ಸಂಘರ್ಷ ಆರಂಭವಾದ ನಂತರದಲ್ಲಿ ಐರೋಪ್ಯ ಒಕ್ಕೂಟದ ದೇಶಗಳು ರಷ್ಯಾ ಇಂಧನದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಮುಂದಾದವು. ಆಗ ರಷ್ಯಾ, ಭಾರತ ಮತ್ತು ಚೀನಾಕ್ಕೆ ಕಚ್ಚಾ ತೈಲ ರಫ್ತು ಹೆಚ್ಚಿಸಲು ಆರಂಭಿಸಿತು.

ಚೀನಾ ಮತ್ತು ಭಾರತಕ್ಕೆ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ಪೂರೈಕೆಯಾಗುತ್ತಿದೆ. ‘ನಮ್ಮ ಇಂಧನ ಸಂಪನ್ಮೂಲಗಳಲ್ಲಿ ಹೆಚ್ಚಿನ ಪಾಲನ್ನು ನಮ್ಮೊಂದಿಗೆ ಸ್ನೇಹದಿಂದ ಇರುವ ದೇಶಗಳಿಗೆ ಕಳುಹಿಸುತ್ತಿದ್ದೇವೆ’ ಎಂದು ರಷ್ಯಾ ಉಪ ಪ್ರಧಾನಿ ಅಲೆಕ್ಸಾಂಡರ್ ನೊವಾಕ್ ಅವರು ಹೇಳಿರುವುದಾಗಿ ರಷ್ಯಾದ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

‘ಭಾರತಕ್ಕೆ ರಫ್ತು ಮಾಡುವ ಕಚ್ಚಾ ತೈಲದ ಪ್ರಮಾಣವು ಕಳೆದ ವರ್ಷ 22 ಪಟ್ಟು ಹೆಚ್ಚಾಗಿದೆ’ ಎಂದು ನೊವಾಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT