ಮಂಗಳವಾರ, ನವೆಂಬರ್ 24, 2020
25 °C

ಸಾಯಿ ಗೋಲ್ಡ್‌: ರಿಯಾಯಿತಿ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಬ್ಬಗಳ ಸಂದರ್ಭದಲ್ಲಿ ಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌ ಹಾಗೂ ಶ್ರೀಸಾಯಿ ಸ್ಯಾರೀಸ್ ಪ್ಯಾಲೇಸ್‌ನಲ್ಲಿ ಹಲವು ರಿಯಾಯಿತಿ ಕೊಡುಗೆಗಳನ್ನು ಘೋಷಿಸಲಾಗಿದೆ. ‘ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ’ ಎಂದು ಎರಡೂ ಮಳಿಗೆಗಳ ಮಾಲೀಕರಾದ ಟಿ.ಎ. ಶರವಣ ಹೇಳಿದ್ದಾರೆ.

ಪ್ರತಿ ಕೆ.ಜಿ ಬೆಳ್ಳಿ ಖರೀದಿಯ ಮೇಲೆ ₹ 2 ಸಾವಿರದ ರಿಯಾಯಿತಿ ಇದೆ. ಪ್ರತಿ ಗ್ರಾಂ ಚಿನ್ನಾಭರಣ ಖರೀದಿಯ ಮೇಲೆ ₹ 125 ರಿಯಾಯಿತಿ ಪಡೆಯಬಹುದು. ಹಳೆಯ ಚಿನ್ನ ಮಾರಾಟ ಮಾಡಬೇಕಾದರೆ, ಹಾಲಿ ಮಾರುಕಟ್ಟೆಯ ದರಕ್ಕಿಂತ ಪ್ರತಿ ಗ್ರಾಂ ಚಿನ್ನದ ಮೇಲೆ ₹ 50 ಹೆಚ್ಚು ಹಣ ನೀಡುವುದಾಗಿ ಗೋಲ್ಡ್ ಪ್ಯಾಲೇಸ್ ತಿಳಿಸಿದೆ.

ಪ್ರತಿ ಕ್ಯಾರಟ್‌ ಡೈಮಂಡ್‌ ಆಭರಣ ಖರೀದಿಯ ಮೇಲೆ ₹ 5 ಸಾವಿರ ರಿಯಾಯಿತಿ ಸಿಗಲಿದೆ.

ಸ್ಯಾರೀಸ್ ಪ್ಯಾಲೇಸ್‌ನಲ್ಲಿ ಸೀರೆಗಳ ಖರೀದಿಯ ಮೇಲೆ ಶೇ 10ರಷ್ಟು ರಿಯಾಯಿತಿ ಇದೆ. ಒಂದು ಸೀರೆ ಕೊಂಡರೆ ಇನ್ನೊಂದು ಸೀರೆ ಉಚಿತವಾಗಿ ಪಡೆಯಬಹುದು.

‘ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸುಸಂದರ್ಭ. ದೀಪಾವಳಿ ಹಬ್ಬ ಹತ್ತಿರದಲ್ಲಿ ಇರುವುದರಿಂದ ನಾವು ಹೆಚ್ಚಿನ ರಿಯಾಯಿತಿಗಳನ್ನು ಘೋಷಿಸಿದ್ದೇವೆ’ ಎಂದು ಶರವಣ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು